ಶುಕ್ರವಾರ, ಅಕ್ಟೋಬರ್ 29, 2021
20 °C

ಪಾಕಿಸ್ತಾನದ ದಕ್ಷಿಣ ಭಾಗದಲ್ಲಿ ಭೂಕಂಪ: ಕನಿಷ್ಠ 15 ಮಂದಿ ಸಾವು

ರಾಯಿಟರ್ಸ್‌ /ಎಎಫ್‌ಪಿ Updated:

ಅಕ್ಷರ ಗಾತ್ರ : | |

ಭೂಕಂಪನ ಮಾಪನ–ಪ್ರಾತಿನಿಧಿಕ ಚಿತ್ರ

ರಾಯಿಟರ್ಸ್‌: ದಕ್ಷಿಣ ಪಾಕಿಸ್ತಾನದಲ್ಲಿ ಗುರುವಾರ ಭೂಕಂಪ ಸಂಭವಿಸಿದ್ದು, ಕನಿಷ್ಠ 15 ಮಂದಿ ಸಾವಿಗೀಡಾಗಿರುವುದು ವರದಿಯಾಗಿದೆ. 

5.7ರಷ್ಟು ತೀವ್ರತೆಯ ಭೂಕಂಪ ಆಗಿರುವುದಾಗಿ ಯುರೋಪಿಯನ್‌ ಮೆಡಿಟರೇನಿಯನ್‌ ಭೂಕಂಪ ವಿಜ್ಞಾನ ಕೇಂದ್ರವು (ಇಎಂಎಸ್‌ಸಿ) ತಿಳಿಸಿದೆ. ಪಾಕಿಸ್ತಾನದ ಕ್ವೆಟ್ಟಾದಿಂದ ಪೂರ್ವ–ಈಶಾನ್ಯ ಭಾಗದಲ್ಲಿ 102 ಕಿ.ಮೀ ದೂರದಲ್ಲಿ 10 ಕಿ.ಮೀ ಆಳದ ಭೂಗರ್ಭದಲ್ಲಿ ಭೂಕಂಪನ ಕೇಂದ್ರ ಗುರುತಿಸಲಾಗಿದೆ. 

ಭೂಕಂಪನದಿಂದ ಮನೆಗಳ ಛಾವಣಿ ಮತ್ತು ಗೋಡೆಗಳು ಕುಸಿದು ಅವಶೇಷಗಳ ಅಡಿಯಲ್ಲಿ ಸಿಲುಕಿ ಹಲವು ಮಂದಿ ಸಾವಿಗೀಡಾಗಿರುವುದಾಗಿ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆ ಮತ್ತು ಆರು ಮಕ್ಕಳು ಸೇರಿ 20 ಜನ ಮೃತಪಟ್ಟಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ. 

ರಕ್ಷಣಾ ಕಾರ್ಯಾಚಾರಣೆ ನಡೆಯುತ್ತಿದ್ದು, ಸುಮಾರು 200 ಮಂದಿ ಭೂಕಂಪನದಿಂದ ತೊಂದರೆಗೆ ಸಿಲುಕಿದ್ದಾರೆ ಹಾಗೂ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇರುವುದಾಗಿ ತಿಳಿದು ಬಂದಿದೆ. 

ಬಲೋಚಿಸ್ತಾನದ ಹರ್ನಯ್‌ ಭೂಕಂಪದಿಂದ ತೀವ್ರ ಹಾನಿಗೆ ಒಳಗಾಗಿದೆ. ಸೂಕ್ತ ರಸ್ತೆ ಸಂಪರ್ಕ, ವಿದ್ಯುತ್‌ ಪೂರೈಕೆ, ಮೊಬೈಲ್‌ ಫೋನ್‌ ನೆಟ್‌ವರ್ಕ್‌ ಇರದ ಕಾರಣದಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿರುವುದಾಗಿ ವರದಿಯಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು