ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈರುತ್ಯ ಇರಾನ್‌ನಲ್ಲಿ 5.9 ತೀವ್ರತೆಯ ಭೂಕಂಪನ

Last Updated 18 ಏಪ್ರಿಲ್ 2021, 8:31 IST
ಅಕ್ಷರ ಗಾತ್ರ

ಟೆಹರಾನ್‌: ನೈರುತ್ಯ ಇರಾನ್‌ನಲ್ಲಿ ಭಾನುವಾರ 5.9 ತೀವ್ರತೆಯ ಭೂಕಂಪನ ಸಂಭವಿಸಿದೆ. ಯಾವುದೇ ಸಾವು–ನೋವು ವರದಿಯಾಗಿಲ್ಲ.

‘ಬಂದರ್ ಜೆನಾವೆಹ್‌ನಲ್ಲಿ ಭೂಕಂಪನ ಸಂಭವಿಸಿದೆ. ಇದರ ಕೇಂದ್ರ ಬಿಂದು 10 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ’ ಎಂದು ಅಮೆರಿಕದ ಭೂ ಸರ್ವೇಕ್ಷಣಾ ಇಲಾಖೆ ತಿಳಿಸಿದೆ.

ಭೂಕಂಪ ಸಂಭವಿಸಿದ ಪ್ರದೇಶ ಇರಾನ್‌ನ ಬುಶೆಹ್ರಾ ಅಣುವಿದ್ಯುತ್‌ ಸ್ಥಾವರದಿಂದ 100 ಕಿ.ಮೀ ದೂರದಲ್ಲಿದೆ.

ಇರಾನ್‌ನಲ್ಲಿ ಆಗಾಗ ಭೂಕಂಪ ಸಂಭವಿಸುತ್ತಲೇ ಇದ್ದು, 2003ರಲ್ಲಿ ಸಂಭವಿಸಿದ್ದ 6.6ರಷ್ಟು ತೀವ್ರತೆಯ ಭೂಕಂಪದಿಂದ ಐತಿಹಾಸಿಕ ಬಾಮ್‌ ನಗರ ನಾಶವಾಗಿತ್ತು ಹಾಗೂ 26 ಸಾವಿರ ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT