ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1971 ರ ಸೋಲಿಗೆ ಮಿಲಿಟರಿ ವೈಫಲ್ಯ ಕಾರಣ: ಬಿಲ್‌ವಾಲ್‌ ಭುಟ್ಟೋ

Last Updated 1 ಡಿಸೆಂಬರ್ 2022, 17:50 IST
ಅಕ್ಷರ ಗಾತ್ರ

ಕರಾಚಿ : 1971ರಲ್ಲಿ ನಡೆದ ಭಾರತ ಮತ್ತು ಪೂರ್ವ ಪಾಕಿಸ್ತಾನ ಯುದ್ಧದಲ್ಲಿ ಪಾಕಿಸ್ತಾನ ಸೋಲಲು ‘ಮಿಲಿಟರಿ ವೈಫಲ್ಯ’ ಕಾರಣ ಎಂದು ಪಾಕಿಸ್ತಾನದ ರಕ್ಷಣಾ ಸಚಿವಬಿಲ್‌ವಾಲ್‌ ಭುಟ್ಟೋ ಆರೋಪಿಸಿದ್ದಾರೆ.

ರಾವಲ್ಪಿಂಡಿಯಲ್ಲಿ ನವೆಂಬರ್‌ 26 ರಂದುಸೇನೆ ಮತ್ತು ಹುತಾತ್ಮ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ್ದ ಸೇನಾಪಡೆ ಮಾಜಿ ಮುಖ್ಯಸ್ಥ ಕಮರ್ ಜಾವೇದ್‌ ಬಜ್ವಾ ಅವರು1971ರ ಯುದ್ಧದಲ್ಲಿ ಪಾಕಿಸ್ತಾನ ಸೋಲಲು ‘ರಾಜಕೀಯ ವೈಫಲ್ಯ’ ಕಾರಣ ಎಂದು ಹೇಳಿದ್ದರು. ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯ (ಪಿಪಿಪಿ) 55ನೇ ಸಂಸ್ಥಾಪನಾ ದಿನದದ ಪ್ರಯುಕ್ತ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಬಿಲ್‌ವಾಲ್‌ ಭುಟ್ಟೊ, ಯುದ್ಧದ ಸೋಲಿಗೆ ಮಿಲಿಟರಿ ವೈಫಲ್ಯವೇ ಕಾರಣ ಎಂದು ತಿರುಗೇಟು ನೀಡಿದರು.
ದ್ದಾರೆ.

‘ನನ್ನ ತಾತ ಝುಲ್ಫೀಕರ್‌ ಅಲಿ ಭುಟ್ಟೊ ಅವರು ಅಧಿಕಾರ ವಹಿಸಿಕೊಂಡಾಗ ಜನ ಎಲ್ಲಾ ನಿರೀಕ್ಷೆಗಳನ್ನೂ ಕಳೆದುಕೊಂಡಿದ್ದರು. ಆದರೆ ಅವರು ದೇಶವನ್ನು ಮತ್ತೆ ಕಟ್ಟಿದರು. ಸೇನಾ ವೈಫಲ್ಯದಿಂದಾಗಿ ಯುದ್ಧ ಕೈದಿಗಳಾಗಿದ್ದ 90 ಸಾವಿರ ಯೋಧರನ್ನು ಅವರು ಕೊನೆಗೂ ದೇಶಕ್ಕೆ ಕರೆತಂದರು. ರಾಜಕೀಯ ಭವಿಷ್ಯ, ಏಕತೆ, ಒಳಗೊಳ್ಳುವಿಕೆಯ ಫಲವಾಗಿಯೇ ಇದೆಲ್ಲ ಸಾಧ್ಯವಾಗಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

1971ರ ಯುದ್ಧದಲ್ಲಿ 92 ಸಾವಿರ ಸೈನಿಕರು ಶರಣಾಗತರಾಗಿದ್ದರು ಎಂಬುದನ್ನು ಅವರು ಅಲ್ಲಗಳೆದರು. ಯುದ್ಧರಂಗದಲ್ಲಿ ಇದ್ದವರು ಕೇವಲ 34 ಸಾವಿರ ಸಶಸ್ತ್ರ ಸೈನಿಕರಾಗಿದ್ದರು. ಉಳಿದವರು ಸರ್ಕಾರದ ವಿವಿಧ ಇಲಾಖೆಗಳಿಗೆ ಸೇರಿದವರಾಗಿದ್ದರು ಎಂದರು.

ಬಿಲ್‌ ಕ್ಲಿಂಟನ್‌ಗೆ ಕೋವಿಡ್ ದೃಢ
ವಾಷಿಂಗ್ಟನ್‌ (ಪಿಟಿಐ): ಅಮೆರಿಕದ ಮಾಜಿ ಅಧ್ಯಕ್ಷಬಿಲ್‌ ಕ್ಲಿಂಟನ್‌ ಅವರಿಗೆ ಕೋವಿಡ್ ದೃಢಪಟ್ಟಿದ್ದು, ಅದು ಸೌಮ್ಯ ಲಕ್ಷಣವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

‘ನಾನು ಲಸಿಕೆ ತಗೆದುಕೊಂಡಿದ್ದರಿಂದ ನನ್ನ ಕೋವಿಡ್ ಲಕ್ಷಣ ಸೌಮ್ಯವಾಗಿದೆ. ಜನರು ಸಹ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಕ್ಲಿಂಟನ್ ಟ್ವೀಟ್ ಮಾಡಿದ್ದಾರೆ.

ಮೂರು ವರ್ಷಗಳ ಹಿಂದೆ ಕೊರೊನಾ ಪಿಡುಗು ಕಾಣಿಸಿಕೊಂಡ ಬಳಿಕ ಅಮೆರಿಕದಲ್ಲಿ 9.8 ಕೋಟಿ ಮಂದಿಗೆ ಸೋಂಕು ತಗುಲಿದ್ದು, 10 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT