ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಂಗ್‌ಕಾಂಗ್: ಆಪಲ್ ಡೈಲಿ ಸಂಪಾದಕರು, ಸಿಇಒಗೆ ಜಾಮೀನು ನಿರಾಕರಣೆ

Last Updated 19 ಜೂನ್ 2021, 11:05 IST
ಅಕ್ಷರ ಗಾತ್ರ

ಹಾಂಗ್‌ ಕಾಂಗ್‌: ಎರಡು ದಿನಗಳ ಹಿಂದ ರಾಷ್ಟ್ರೀಯ ಭದ್ರತಾ ಕಾನೂನಿನಡಿ ಬಂಧನಕ್ಕೊಳಗಾಗಿದ್ದ ಆಪಲ್ ಡೈಲಿ ಪತ್ರಿಕೆಯ ಮುಖ್ಯ ಸಂಪಾದಕರು ಮತ್ತು ಕಂಪನಿಯ ಮುಖ್ಯಸ್ಥರಿಗೆ ಹಾಂಗ್‌ಕಾಂಗ್‌ ನ್ಯಾಯಾಲಯ ಶನಿವಾರ ಜಾಮೀನು ನಿರಾಕರಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ಮ್ಯಾಜಿಸ್ಟ್ರೇಟ್ ವಿಕ್ಟರ್ ಸೋ ಅವರು, ‘ರಾಷ್ಟ್ರೀಯ ಭದ್ರತಾ ಕಾನೂನನ್ನು ಮತ್ತೆ ಉಲ್ಲಂಘಿಸುವುದಿಲ್ಲ ಎಂಬುದಕ್ಕೆ ಸಾಕಷ್ಟು ಆಧಾರಗಳಿಲ್ಲ‘ ಎಂದು ಹೇಳಿದರು. ಹಾಗೆಯೇ ಆರೋಪಿಗಳನ್ನು ಬಂಧಿಸಿ, ಲೈ ಚಿ ಕೋಕ್ ಕೇಂದ್ರಕ್ಕೆ ಕಳುಹಿಸುವಂತೆ ಆದೇಶಿಸಿದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 13 ಕ್ಕೆ ನಿಗದಿಪಡಿಸಿದರು.

ಮುಖ್ಯ ಸಂಪಾದಕ ರ‍್ಯಾನ್‌ ಲಾ, ನೆಕ್ಸ್ಟ್‌ ಡಿಜಿಟಲ್‌ನ ಸಿಇಒ ಚೌಂಗ್‌ ಕಿಮ್–ಹಂಗ್‌ ಅವರ ವಿರುದ್ಧ ವಿದೇಶಿ ಶಕ್ತಿಗಳ ಜೊತೆ ಕೈಜೋಡಿಸುವ ಮೂಲಕ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟುಮಾಡುತ್ತಿರುವ ಆರೋಪ ಹೊರಿಸಲಾಗಿತ್ತು.

ಲಾ ಮತ್ತು ಸಿಇಒ ಚೌಂಗ್ ಅವರು ಶುಕ್ರವಾರ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾದರು. ವಿಚಾರಣೆ ಆರಂಭಕ್ಕೂ ಮುನ್ನ, ವೇಳೆ ಬ್ಯಾನರ್‌ ಮತ್ತು ಆಪಲ್ ಡೈಲಿಯ ಪ್ರತಿಗಳನ್ನು ಹಿಡಿದ ನೂರಾರು ಕಾರ್ಯಕರ್ತರು ನ್ಯಾಯಾಲಯದ ಹೊರಗೆ ಜಮಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT