ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ.ಆಫ್ರಿಕಾ: ಎಂಟು ರೂಪದರ್ಶಿಗಳ ಮೇಲೆ ಬಂದೂಕುಧಾರಿ ಗುಂಪು ಅತ್ಯಾಚಾರ

Last Updated 30 ಜುಲೈ 2022, 4:50 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್: ಸಂಗೀತ ವಿಡಿಯೊ ಚಿತ್ರೀಕರಣದ ಸೆಟ್‌ಗೆ ನುಗ್ಗಿದ ಬಂದೂಕುಧಾರಿ ಗುಂಪು, ಎಂಟು ರೂಪದರ್ಶಿಗಳ ಮೇಲೆ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೋಹಾನ್ಸ್‌ಬರ್ಗ್‌ನ ಪಶ್ಚಿಮದಲ್ಲಿರುವ ಕ್ರುಗರ್ಸ್‌ಡಾರ್ಪ್‌ನ ಹೊರವಲಯದಲ್ಲಿ ಗುರುವಾರ ಎಂಟು ಯುವತಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಮಿನಿಸ್ಟರ್ ಭೆಕಿ ಸೆಲೆ ಹೇಳಿದ್ದಾರೆ.

ಈ ಹೇಯ ಕೃತ್ಯಕ್ಕೆ ಸಂಬಂಧಿಸಿದಂತೆ 20 ಶಂಕಿತರ ಪೈಕಿ ಮೂವರನ್ನು ಬಂಧಿಸಲಾಗಿದೆ.

ಚಿತ್ರೀಕರಣಕ್ಕಾಗಿ ಶೂಟಿಂಗ್ ಸಿಬ್ಬಂದಿ ಸೆಟ್ ಸಿದ್ಧಪಡಿಸುತ್ತಿದ್ದ ವೇಳೆ ಏಕಾಏಕಿ ಬಂದೂಕುಧಾರಿ ಗುಂಪುದಾಳಿ ನಡೆಸಿದೆ. ಕೆಲವು ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಸೆಟ್‌ನಲ್ಲಿದ್ದ ಕೆಲವು ಪುರುಷರನ್ನು ವಿವಸ್ತ್ರಗೊಳಿಸಿ ವಸ್ತುಗಳನ್ನು ದೋಚಲಾಗಿದೆ. ಅಕ್ರಮ ಗಣಿಗಾರಿಕೆ ನಡೆಸುವ 'ಜಮಾ ಜಮಾ'ಗೆ ಸೇರಿದ ವಿದೇಶಿಯರು ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT