ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನೊಬ್ಬನಿಂದಲೇ ಎಲ್ಲವೂ ಸಾಧ್ಯವಿಲ್ಲ: ಆದಾರ್‌ ಪೂನಾವಾಲ್ಲಾ

ಭಾರತದಲ್ಲಿ ಲಸಿಕಾ ತಯಾರಿಕಾ ಒತ್ತಡ ಬಿಚ್ಚಿಟ್ಟ ಸೆರಂ ಸಂಸ್ಥೆಯ ಸಿಇಒ
Last Updated 1 ಮೇ 2021, 22:12 IST
ಅಕ್ಷರ ಗಾತ್ರ

ಲಂಡನ್: ‘ಕೋವಿಡ್‌ ಎರಡನೇ ಅಲೆಯ ವಿರುದ್ಧ ಹೋರಾಡುತ್ತಿರುವ ಭಾರತದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಲಸಿಕೆಯ ಬೇಡಿಕೆ ಹೆಚ್ಚುತ್ತಿದ್ದು, ಬೇಡಿಕೆಯನ್ನು ಪೂರೈಸುವ ಜವಾಬ್ದಾರಿ ನನ್ನ ಹೆಗಲಿಗೇರಿದ್ದು, ಎಲ್ಲವನ್ನೂ ಒಬ್ಬನೇ ಮಾಡಲು ಸಾಧ್ಯವಿಲ್ಲ’ ಎಂದು ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದಾರ್‌ ಪೂನಾವಾಲ್ಲಾ ಶನಿವಾರ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ಅವರಿಗೆ ‘ವೈ’ ಶ್ರೇಣಿಯ ಭದ್ರತೆಯನ್ನು ಒದಗಿಸಿದ್ದು, ಭದ್ರತೆ ಬಳಿಕ ಮೊದಲ ಬಾರಿಗೆ ಅದರ್ ‘ದಿ ಟೈಮ್ಸ್‌’ಗೆ ಸಂದರ್ಶನ ನೀಡಿದ್ದಾರೆ.

ಸಂದರ್ಶನದಲ್ಲಿ ಸೆರಂ ಸಂಸ್ಥೆಗೆ ಲಸಿಕೆಗಳನ್ನು ಪೂರೈಸುವ ಕುರಿತುಭಾರತದಲ್ಲಿ ಕೆಲ ಪ್ರಭಾವಿಗಳು ಪದೇ ಪದೇ ಬೆದರಿಕೆಯ ಕರೆಗಳನ್ನು ಮಾಡುತ್ತಿರುವ ಕುರಿತೂ ಹೇಳಿಕೊಂಡಿದ್ದಾರೆ. ಸೆರಂ ಸಂಸ್ಥೆಯು ಭಾರತದಲ್ಲಿ ಕೋವಿಶೀಲ್ಡ್, ಆಕ್ಸಫರ್ಡ್ ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆಗಳನ್ನು ಉತ್ಪಾದಿಸುತ್ತಿದೆ.

‘ನನ್ನ ಮೇಲೆ ಅತೀವ ಒತ್ತಡವಿದೆ.ಈ ಕಾರಣಕ್ಕಾಗಿ ನಾನು ನನ್ನ ಮಕ್ಕಳೊಂದಿಗೆ ಲಂಡನ್‌ಗೆ ಪ್ರಯಾಣಿಸುವ ನಿರ್ಧಾರ ಕೈಗೊಂಡಿದ್ದೇನೆ’ ಎಂದೂ ಸಂದರ್ಶನದಲ್ಲಿ ಹೇಳಿದ್ದಾರೆ.

‘ನಾನು ಇಲ್ಲಿಯೇ (ಲಂಡನ್‌) ಇರಲು ಬಯಸುತ್ತೇನೆ. ಅಲ್ಲಿನ (ಭಾರತ) ಪರಿಸ್ಥಿತಿಗೆ ನಾನು ಮರಳಿ ಹೋಗಲಾರೆ. ಎಲ್ಲಾ ಜವಾಬ್ದಾರಿಗಳು ನನ್ನೊಬ್ಬನ ಹೆಗಲ ಮೇಲೆ ಬಿದ್ದಿವೆ. ನಾನೊಬ್ಬನೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ನಾನು ಅಲ್ಲಿದ್ದುಕೊಂಡು ನನ್ನ ಕೆಲಸ ಮಾಡುತ್ತಾ ಎಕ್ಸ್, ವೈ, ಝಡ್ ಇಂಥವರು ಹೇಳಿದ್ದನ್ನು ಸರಬರಾಜು ಮಾಡಲು ಸಾಧ್ಯವಿಲ್ಲ. ಅವರು ಏನು ಮಾಡುತ್ತಾರೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಲಸಿಕೆ ಪಡೆಯಬೇಕು ಎಂದು ಎಲ್ಲರೂ ಭಾವಿಸುತ್ತಾರೆ. ಪ್ರಸ್ತುತ ನಾನು ಲಂಡನ್‌ನಲ್ಲಿರುವುದು ಕೂಡ ಲಸಿಕೆ ತಯಾರಿಕೆಯನ್ನು ದೇಶದ ಹೊರಗೂ ಅಂದರೆ ಬ್ರಿಟನ್ ಸೇರಿದಂತೆ ಇತರೆ ದೇಶಗಳಿಗೆ ವಿಸ್ತರಿಸಲು’ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಮುಂದಿನ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ. ಎಲ್ಲರಿಗೂ ಸಾಧ್ಯವಾದಷ್ಟೂ ನೆರವು ನೀಡಲು ಬಯಸುತ್ತೇವೆ’ ಎಂದೂ ಅವರು ತಿಳಿಸಿದ್ದಾರೆ.

‘ಕೋವಿಶೀಲ್ಡ್ ಲಸಿಕೆಯ ದರದ ಕುರಿತು ಹೇಳಿರುವ ಅವರು, ಪ್ರಪಂಚದಲ್ಲೇ ಇಂದಿಗೂ ಕೋವಿಶೀಲ್ಡ್ ಲಸಿಕೆಯ ದರ ಅಗ್ಗವಾಗಿದೆ. ಲಾಭದ ಪ್ರಮಾಣದ ಕುರಿತು ಚಿಂತಿಸದೇ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಉತ್ತಮವಾದದ್ದನ್ನು ನೀಡಲು ಬಯಸುತ್ತೇವೆ. ನಾವು ತಯಾರಿಸುವ ಲಸಿಕೆಗಳ ಕಾರಣದಿಂದಾಗಿ ನಾನು ಯಾವಾಗಲೂ ಭಾರತ ಮತ್ತು ಜಗತ್ತಿನೊಂದಿಗೆ ಜವಾಬ್ದಾರಿಯನ್ನು ಹೊಂದಿದ್ದೇನೆ’ ಎಂದೂ ಅವರು ಹೇಳಿದ್ದಾರೆ.

‘ಅವರಿಗೆ ಬರುತ್ತಿರುವ ಬೆದರಿಕೆಯ ಕರೆಗಳನ್ನು ಗಮನದಲ್ಲಿಟ್ಟುಕೊಂಡು ರಕ್ಷಣೆ ನೀಡಲಾಗಿದೆ. ಅವರು ದೇಶದ ಯಾವುದೇ ಭಾಗಕ್ಕೆ ಪ್ರಯಾಣಿಸಿದರೂ ಅವರೊಂದಿಗೆ ಸಿಆರ್‌ಪಿಎಫ್ ಸಶಸ್ತ್ರ ಕಮಾಂಡೊಗಳು ಇರುತ್ತಾರೆ. ಅವರಿಗೆ ವೈ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದೆ’ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT