ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಿತ್ರ ಹವಾಮಾನ ವೈಪರೀತ್ಯ: ಅಮೆರಿಕನ್ನರು ತತ್ತರ

Last Updated 14 ಜೂನ್ 2022, 13:51 IST
ಅಕ್ಷರ ಗಾತ್ರ

ವಾಷಿಂಗ್ಟನ್‌, ಹೆಲೆನಾ, ಫ್ಲಾಗ್‌ಸ್ಟಾಫ್: ಒಂದೆಡೆ ಅತಿಯಾದ ತಾಪಮಾನ, ತೇವಾಂಶ, ಮತ್ತೊಂದೆಡೆ ಪ್ರವಾಹ, ಇನ್ನೊಂದೆಡೆ ಕಾಳ್ಗಿಚ್ಚಿನ ಪರಿಣಾಮಶುಷ್ಕ ಗಾಳಿ... ಹೀಗೆ ವಿಚಿತ್ರ ಹವಾಮಾನ ವೈಪರೀತ್ಯಕ್ಕೆ ಅಮೆರಿಕದ ಬಹುತೇಕ ರಾಜ್ಯಗಳು ತತ್ತರಿಸಿದ್ದು, ಜನಜೀವನ ದುಸ್ತರಗೊಂಡಿದೆ.

ಗಲ್ಫ್ ಕರಾವಳಿಯ ಕೆಲವು ಭಾಗಗಳ ಮೂಲಕ ಗ್ರೇಟ್ ಲೇಕ್‌ ವರೆಗೆ ಮತ್ತು ಪೂರ್ವದ ಕೆರೊಲಿನಾಸ್‌ವರೆಗೆ ವಿಸ್ತರಿಸಿರುವ ರಾಜ್ಯಗಳಲ್ಲಿ ಹೆಚ್ಚಿನ ತಾಪಮಾನ ಮತ್ತು ತೇವಾಂಶದ ವಾತಾವರಣ ಉಂಟಾಗಿದೆ. ಇದೇ ವಾತಾವರಣ ಬುಧವಾರದವರೆಗೆ ಇರಲಿದೆ.ಇದರಿಂದಾಗಿಸುಮಾರು 10 ಕೋಟಿ ಜನರು ಮನೆಯಿಂದ ಹೊರಗೆ ಬರದೇ, ಮನೆಯೊಳಗೇ ಇರುವಂತೆ ಮೇರಿಲ್ಯಾಂಡ್‌ನ ರಾಷ್ಟ್ರೀಯ ಹವಾಮಾನ ಸೇವಾ ಮುನ್ಸೂಚನಾ ಕೇಂದ್ರದ ಅಧಿಕಾರಿಗಳು ಸೋಮವಾರ ಸೂಚನೆ ನೀಡಿದ್ದಾರೆ.

ದಕ್ಷಿಣ-ಮಧ್ಯ ಮೊಂಟಾನಾದಲ್ಲಿ, ಸ್ಟಿಲ್‌ವಾಟರ್ ನದಿಯ ಪ್ರವಾಹದಿಂದಾಗಿ ನೂರಾರು ಜನರು ನೆಲೆ ಕಳೆದುಕೊಂಡಿದ್ದಾರೆ. ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನವನ ಮತ್ತು ಸುತ್ತಮುತ್ತಲಿನ ಸಮುದಾಯಗಳಿಗೆ ಭಾರಿ ಪ್ರವಾಹದಿಂದ ದಿಕ್ಕು ತೋಚದಂತಾಗಿದ್ದಾರೆ. ಕೆಲವು ಕಡೆ ಭೂಕುಸಿತವೂ ಉಂಟಾಗಿದೆ. ಭಾರಿ ಮಳೆ ಮತ್ತು ಹಿಮಕರಗುವಿಕೆಯಿಂದ ಉಂಟಾದ ಪ್ರವಾಹದಿಂದಾಗಿರಸ್ತೆಗಳು ಮತ್ತು ಸೇತುವೆಗಳು ಕೊಚ್ಚಿಹೋಗಿವೆ.ಗಾರ್ಡ್ನರ್ ಮತ್ತು ಲಾಮರ್ ನದಿಗಳ ಪ್ರವಾಹದಿಂದ ರಸ್ತೆಗಳು ಸಂಪೂರ್ಣ ಹಾನಿಗೀಡಾಗಿವೆ.

ಕಾರ್ವಿನ್ ಸ್ಪ್ರಿಂಗ್ಸ್‌ನಲ್ಲಿರುವ ಯೆಲ್ಲೊಸ್ಟೋನ್ ನದಿಯ ಮಟ್ಟ ಸೋಮವಾರ 13.88 ಅಡಿ (4.2 ಮೀಟರ್)ಗೆ ಏರಿದೆ. ಇದು 1918ರಲ್ಲಿ 11.5 ಅಡಿಗೆ (3.5 ಮೀಟರ್) ನದಿ ಮಟ್ಟ ಏರಿಕೆಯಾಗಿದ್ದು ಈವರೆಗಿನ ದಾಖಲೆಯಾಗಿತ್ತು. ಮೂರು ದಿನಗಳಲ್ಲಿ ಯೆಲ್ಲೊಸ್ಟೋನ್‌ನಲ್ಲಿ 6 ಸೆಂಟಿಮೀಟರ್‌ ಮತ್ತುಬಿಯರ್‌ಟೂತ್ ಪರ್ವತಗಳ ಪ್ರದೇಶದಲ್ಲಿ 10 ಸೆಂಟಿಮೀಟರ್‌ನಷ್ಟು ಭಾರಿ ಮಳೆಯಾಗಿದೆ ಎಂದುರಾಷ್ಟ್ರೀಯ ಹವಾಮಾನ ಸೇವಾ ಇಲಾಖೆ ಹೇಳಿದೆ.

ಕಾಳ್ಗಿಚ್ಚು:ಪಶ್ಚಿಮ ಅಮೆರಿಕದಕ್ಯಾಲಿಫೋರ್ನಿಯಾದಿಂದ ನ್ಯೂ ಮೆಕ್ಸಿಕೊದವರೆಗೆ ಹರಡಿರುವ ಕಾಳ್ಗಿಚ್ಚಿನಿಂದ ಸೋಮವಾರ ಬಿಸಿ, ಶುಷ್ಕ ಮತ್ತು ಗಾಳಿಯ ವಾತಾವರಣ ಸೃಷ್ಟಿಯಾಗಿದ್ದು, ‌ನೂರಾರು ಜನರು ತಮ್ಮ ಮನೆಗಳನ್ನು ತೊರೆಯುವಂತೆ ಮಾಡಿದೆ.

ಅರಿಜೋನಾದ ಫ್ಲಾಗ್‌ಸ್ಟಾಫ್‌ನ ಹೊರವಲಯದ ನಿವಾಸಿಗಳನ್ನೂ ಸ್ಥಳಾಂತರಿಸಲಾಗಿದೆ. ಅರಿಝೋನಾ ಸ್ನೋಬೌಲ್ ಸ್ಕೀ ರೆಸಾರ್ಟ್ ಅನ್ನು ಮುನ್ನೆಚ್ಚರಿಕೆಯಾಗಿ ಮುಚ್ಚಲಾಗಿದೆ. ಬೆಂಕಿ ನಿಯಂತ್ರಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಕಾಳ್ಗಿಚ್ಚಿನಿಂದ ಉಂಟಾಗಿರುವ ಶಾಖದಿಂದ ಹಿಮ ಕರಗಿ, ನದಿಗಳು ಪ್ರವಾಹ ಸೃಷ್ಟಿಸಿವೆ. ಭೂಕುಸಿತವೂ ಆಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಕಿಯುಮಿಂಚಿನ ವೇಗದಲ್ಲಿ ಸುಮಾರು 193 ಚದರ ಮೈಲಿಗಳು (500 ಚದರ ಕಿಲೋಮೀಟರ್) ಆವರಿಸಿದೆ ಎಂದು ಅಂದಾಜಿಸಲಾಗಿದೆ. ಇದು ನೈರುತ್ಯ ಅಲಾಸ್ಕಾದ ಹೆಚ್ಚಾಗಿ ಮರಗಳಿಲ್ಲದ ಟಂಡ್ರಾದಲ್ಲಿ ಒಣ ಹುಲ್ಲು ಮತ್ತು ಪೊದೆಗಳನ್ನು ಭಸ್ಮ ಮಾಡುತ್ತಿದೆ.ಸೋಮವಾರ ಮಧ್ಯಾಹ್ನದ ವೇಳೆಗೆ ಸುಮಾರು 3.9 ಚದರ ಕಿಮೀ ವ್ಯಾಪ್ತಿಯಲ್ಲಿ ಪೈನ್ ಮರಗಳು ಮತ್ತು ಒಣ ಹುಲ್ಲು ಸುಟ್ಟುಹಾಕಿದೆ ಎಂದು ಅಗ್ನಿಶಾಮಕ ವಕ್ತಾರ ಡಾನಾ ಡಿಯರ್ಕ್ಸ್ ಹೇಳಿದ್ದಾರೆ.

‘57 ವರ್ಷದ ವ್ಯಕ್ತಿಯೊಬ್ಬ ಶನಿವಾರ ಟಾಯ್ಲೆಟ್ ಪೇಪರ್‌ಗೆ ಬೆಂಕಿ ಹೊತ್ತಿಸಿ ಬಂಡೆಯ ಕೆಳಗೆ ಇಟ್ಟಿರುವುದುಅರಿಜೋನಾ ಕಾಳ್ಗಿಚ್ಚಿನ ಮೂಲವಾಗಿದೆ’ ಎಂದು ಬಳಿಅಮೆರಿಕದ ಅರಣ್ಯ ಸೇವೆ ಕಾನೂನು ಜಾರಿ ಅಧಿಕಾರಿಗಳು ಶಂಕಿಸಿದ್ದಾರೆ.

ಕೂಲಿಂಗ್‌ ಕೇಂದ್ರ: ಸೇಂಟ್ ಲೂಯಿಸ್, ಮೆಂಫಿಸ್, ಮಿನ್ನಿಯಾಪೋಲಿಸ್,ಜಾಕ್ಸನ್, ಮಿಸ್ಸಿಸ್ಸಿಪ್ಪಿ, ದಕ್ಷಿಣ ಕೆರೊಲಿನಾ ಪ್ರದೇಶಗಳಲ್ಲಿ ತಾಪಮಾನ38 ಡಿಗ್ರಿ ಸೆಲ್ಸಿಯಸ್‌ನಿಂದ 43 ಡಿಗ್ರಿ ಸೆಲ್ಸಿಯಸ್ ನಡುವೆ ಇದೆ. ಷಿಕಾಗೋ,ಉತ್ತರ ಕೆರೊಲಿನಾದ ಮೆಕ್ಲೆನ್‌ಬರ್ಗ್ ಕೌಂಟಿ ಸೇರಿ ಹಲವು ನಗರಗಳಲ್ಲಿ ಕೂಲಿಂಗ್‌ ಕೇಂದ್ರಗಳನ್ನು ತೆರೆಯಲು ಸ್ಥಳೀಯಾಡಳಿತಗಳು ಮುಂದಾಗಿವೆ. 1995ರಲ್ಲಿ ಉಂಟಾದ ಶಾಖದ ಅಲೆಯಿಂದ 700ಕ್ಕೂ ಹೆಚ್ಚು ಜನರು, ಅದರಲ್ಲೂ ಹೆಚ್ಚಿನ ವೃದ್ಧರು ಸಾವನ್ನಪ್ಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT