ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer| ತಾಲಿಬಾನ್‌ಗೆ ತಲೆನೋವಾಗಿದೆ ಐಎಸ್‌–ಕೆ: ಇಲ್ಲಿದೆ ಸಂಪೂರ್ಣ ವಿವರ

Last Updated 7 ಸೆಪ್ಟೆಂಬರ್ 2021, 12:33 IST
ಅಕ್ಷರ ಗಾತ್ರ

ಕಾಬೂಲ್‌:‘ಭಯೋತ್ಪಾದನೆ ವಿರುದ್ಧದ ಅಮೆರಿಕದ ಯುದ್ಧ’ದಭಾಗವಾಗಿ ಹಲವು ದಶಕಗಳಿಂದ ಅಫ್ಗಾನಿಸ್ತಾನದಲ್ಲಿ ತಾಲಿಬಾನ್, ಅಮೆರಿಕ, ನ್ಯಾಟೋ ಪಡೆಗಳು, ಅಫ್ಗನ್‌ ಸರ್ಕಾರದ ನಡುವೆ ಸಂಘರ್ಷಗಳು ನಡೆದಿವೆ. ಆದರೆ, ವಾಸ್ತವವೇ ಬೇರೆ.

ಅಫ್ಘಾನಿಸ್ತಾನವು, ಯಾವುದೇ ಕಾನೂನು ಬದ್ಧ ಸರ್ಕಾರವನ್ನು ವಿರೋಧಿಸುವ, ತಿರಸ್ಕರಿಸುವ, ಬಣ ಮತ್ತು ಜನಾಂಗೀಯವಾದವನ್ನು ಪ್ರತಿಪಾದಿಸುವ ದೇಶ.ಆ ಬಣಗಳಲ್ಲಿ ಒಂದು ತಾಲಿಬಾನ್.

ಆದರೆ ತಾಲಿಬಾನ್‌ ಅನ್ನೂ ವಿರೋಧಿಸುವ ಹಲವು ಬಣಗಳು ಅಫ್ಗಾನಿಸ್ತಾನದಲ್ಲಿವೆ. ಪರಸ್ಪರರನ್ನು ವಿರೋಧಿಸುವಈ ಬಣಗಳು,ತಮ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳಲು, ಆಳ್ವಿಕೆ ಉಳಿಸಿಕೊಳ್ಳಲು, ಅಧಿಕಾರ ಮತ್ತು ಲಾಭ ಪಡೆಯಲು ಬಯಸುತ್ತವೆ.

ತಾಲಿಬಾನ್‌ ವಿರೋಧಿ ಬಣಗಳಲ್ಲಿ ಸದ್ಯ ಪ್ರಮುಖವಾಗಿ ಕಾಣಿಸಿಕೊಂಡಿರುವುದು ಇಸ್ಲಾಮಿಕ್ ಸ್ಟೇಟ್ ಖುರಾಸನ್ ಪಡೆ (ಐಎಸ್-ಕೆ). ಇದು ಆಗಸ್ಟ್ 26 ರಂದು ಕಾಬೂಲ್‌ನ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಆತ್ಮಾಹುತಿ ಬಾಂಬ್ ದಾಳಿ ನಡೆಸುವ ಮೂಲಕ ತನ್ನ ಪ್ರತಿರೋಧ ಮತ್ತು ಅಸ್ತಿತ್ವವನ್ನು ಪ್ರದರ್ಶಿಸಿತ್ತು. ಈ ದಾಳಿಯಲ್ಲಿ ಕನಿಷ್ಠ 170 ಅಫ್ಗನ್ನರು ಮತ್ತು 13 ಅಮೆರಿಕ ಸೈನಿಕರುಸಾವಿಗೀಡಾಗಿದ್ದರು.

ಇಸ್ಲಾಮಿಕ್ ನಿಯಮಗಳು ಮತ್ತು ರಾಜಕೀಯದ ವ್ಯಾಖ್ಯಾನದ ಅಡಿಯಲ್ಲಿ ತಾಲಿಬಾನ್‌ ಸಂಘಟನೆಯು ಅಫ್ಗಾನಿಸ್ತಾನದಲ್ಲಿ ಸರ್ಕಾರ, ನಿಯಮ ರೂಪಿಸಲು ಕೆಲಸ ಮಾಡುತ್ತಿದೆ. ಆದರೆ, ತಾಲಿಬಾನ್‌ಗೆ ಐಎಸ್‌–ಕೆ ಪ್ರಮುಖ ಭಯೋತ್ಪಾದಕ ಬೆದರಿಕೆಯಾಗಿ ನಿಂತಿದೆ.

ಇಡೀ ದೇಶವನ್ನು ವಶಕ್ಕೆ ಪಡೆಯಲಾಗಿದೆ, ದೇಶದಲ್ಲಿ ಸುರಕ್ಷತೆ ನೆಲೆಸುವಂತೆ ಮಾಡಲಾಗುತ್ತಿದೆ ಎಂಬ ತಾಲಿಬಾನ್‌ ಹೇಳಿಕೆಗಳನ್ನು ಕಾಬೂಲ್‌ನಲ್ಲಿ ನಡೆದ ಐಎಸ್‌–ಕೆ ದಾಳಿಯು ಅಲ್ಲಗಳೆಯುವಂತೆ ಮಾಡಿತ್ತು. ಈ ಮೂಲಕ ಅಫ್ಗಾನಿಸ್ತಾನ ಇನ್ನೂ ಸಂಪೂರ್ಣವಾಗಿ ತಾಲಿಬಾನ್‌ ವಶವಾಗಿಲ್ಲ ಎಂಬುದನ್ನು ಬಹಿರಂಗಪಡಿಸಿತ್ತು.

ಯಾರು ಈ ಐಎಸ್‌–ಖುರಾಸನಿಗಳು?

ಐಸಿಸ್‌ನ ಭಾಗವಾಗಿರುವ ಐಎಸ್‌–ಖುರಾಸನ್‌ 2015ರಲ್ಲಿ ಸ್ಥಾಪನೆಗೊಂಡಿತು. ಇರಾನ್‌ನಿಂದ ಪಶ್ಚಿಮ ಹಿಮಾಲಯದವರೆಗಿನ ಪ್ರಾಂತ್ಯವನ್ನುಇದು ಸೂಚಿಸುತ್ತದೆ.ಅಫ್ಘಾನಿಸ್ತಾನದಲ್ಲಿರುವ ಎಲ್ಲಾ ಜಿಹಾದಿ ಉಗ್ರಗಾಮಿ ಗುಂಪುಗಳಲ್ಲೇ ಖುರಾಸನ್‌ ಪಡೆ ಅತ್ಯಂತ ತೀವ್ರ ಮತ್ತು ಹಿಂಸಾತ್ಮಕ ಎನಿಸಿಕೊಂಡಿದೆ.

ಸ್ಥಳೀಯರು, ಅಫ್ಗನ್‌, ಪಾಕಿಸ್ತಾನದ ಮಾಜಿತಾಲಿಬಾನ್‌ ಸದಸ್ಯರು, ಅಲ್ ಖೈದಾದ ಮಾಜಿ ಸದಸ್ಯರು, ಉಗ್ರರನ್ನು ಐಎಸ್‌–ಕೆ ಒಳಗೊಂಡಿದೆ. ಅಫ್ಗಾನಿಸ್ತಾನದ ನಂಗರ್‌ಹಾರ್ ಮತ್ತು ಕುನಾರ್ ಪ್ರಾಂತ್ಯಗಳಲ್ಲಿ ಕೇಂದ್ರೀಕೃತವಾಗಿರುವ ಈ ಸಂಘಟನೆ ಪಾಕಿಸ್ತಾನ-ಅಫ್ಗಾನಿಸ್ತಾನದ ಗಡಿಯುದ್ದಕ್ಕೂ ವ್ಯಾಪಿಸಿದೆ.

ಅಫ್ಗಾನಿಸ್ತಾನದ ಮೇಲೆ ತಾಲಿಬಾನ್ ಹಿಡಿತ ಸಾಧಿಸುತ್ತಲೇ ಇತ್ತ, ಐಎಸ್-ಕೆಗೆ ಸದಸ್ಯರ ನೇಮಕಾತಿಯೂ ಆರಂಭವಾಗಿದೆ ಎಂಬ ವರದಿಗಳು ಪ್ರಕಟವಾಗಿವೆ. ಅಲ್ಲದೇ, ಪ್ರತಿಭಟನಾ ರ್ಯಾಲಿಗಳು, ಬಾಲಕಿಯರಿಗೆ ಶಿಕ್ಷಣ ನೀಡುವ ಶಾಲೆಗಳು, ಆಸ್ಪತ್ರೆಗಳು ಮತ್ತು ಮಾರುಕಟ್ಟೆಗಳ ಮೇಲೆ ದಾಳಿ ಸಂಘಟಿಸಿ ನಾಗರಿಕರನ್ನು ಕೊಲ್ಲುವ ಮೂಲಕ ಗಮನ ಸೆಳೆಯುವ ತಂತ್ರವನ್ನು ಈ ಸಂಘಟನೆ ಮಾಡಿದೆ ಎಂದು ಹೇಳಲಾಗಿದೆ.

ತಾಲಿಬಾನ್ ಅಫ್ಗಾನಿಸ್ತಾನದಲ್ಲಿ ಇಸ್ಲಾಮಿಕ್ ವ್ಯವಸ್ಥೆಯನ್ನು ಸ್ಥಾಪಿಸುತ್ತಿಲ್ಲ ಎಂದು ಐಎಸ್‌–ಕೆ ಆರೋಪಿಸಿದ್ದು, ಮಹಿಳೆಯರಿಗೆ ಕೆಲಸ ಮಾಡಲು, ಟಿ.ವಿಗಳಲ್ಲಿ ಕಾಣಿಸಿಕೊಳ್ಳಲು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಹೋಗಲು ಅವಕಾಶ ನೀಡಿರುವುದಕ್ಕೆ ಆಕ್ಷೇಪಿಸುತ್ತಿದೆ. ಕಾಬೂಲ್ ವಿಮಾನ ನಿಲ್ದಾಣದ ಬಳಿ ದಾಳಿ ನಡೆಸಿದಾಗ ಐಎಸ್‌–ಕೆ ಈ ಕಾರಣಗಳನ್ನು ನೀಡಿ ತಾಲಿಬಾನ್‌ ಅನ್ನು ಟೀಕಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT