ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕರ್ಮ ಕೆಫೆಗೆ ಸ್ವಾಗತ': ಕೆನಡಾ ಪ್ರಧಾನಿ‌ ಟ್ರುಡೊ ಕಾಲೆಳೆದ ವೆಂಕಟೇಶ್ ಪ್ರಸಾದ್

Last Updated 31 ಜನವರಿ 2022, 11:49 IST
ಅಕ್ಷರ ಗಾತ್ರ

ಕೆನಡಾದಲ್ಲಿಕೋವಿಡ್-19 ನಿಯಂತ್ರಣದ ಸಲುವಾಗಿ ಹೇರಲಾಗಿರುವ ನಿರ್ಬಂಧಗಳನ್ನು ವಿರೋಧಿಸಿ ಅಲ್ಲಿನನಾಗರಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ, ಪ್ರಧಾನ ಮಂತ್ರಿ ಜಸ್ಟಿನ್‌ ಟ್ರುಡೊ ಮತ್ತು ಅವರ ಕುಟುಂಬವು ರಾಜಧಾನಿಒಟ್ಟಾವಾದಿಂದಅಜ್ಞಾತ ಸ್ಥಳಕ್ಕೆ ವಾಸ್ತವ್ಯ ಬದಲಿಸಿಕೊಂಡಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.‌

ಇದನ್ನು ಉಲ್ಲೇಖಿಸಿ, ಮಾಜಿ ಕ್ರಿಕೆಟಿಗವೆಂಕಟೇಶ್‌ ಪ್ರಸಾದ್‌ ಅವರು ಟ್ವಿಟರ್‌ ಮೂಲಕ, ಟ್ರುಡೊ ಅವರ ಕಾಲೆಳೆದಿದ್ದಾರೆ.

'ಕರ್ಮ ಕೆಫೆಗೆ ಸ್ವಾಗತ. ಇಲ್ಲಿ ಯಾವುದೇ ಮೆನು (ತಿಂಡಿಯ ವಿವರ ಪಟ್ಟಿ) ಇಲ್ಲ. ನಿಮ್ಮ ಅರ್ಹತೆಯನುಸಾರ ಸೇವೆ ದೊರೆಯಲಿದೆ.ನೀವು ಎಷ್ಟು ಪ್ರಬಲರಾಗಿದ್ದೀರೋ, ಅದರಂತೆಯೇ ಖಾದ್ಯ ಸ್ವೀಕರಿಸಲಿದ್ದೀರಿʼ ಎಂದು ಜಸ್ಟಿನ್‌ ಟ್ರುಡೊ ಅವರ ಹೆಸರನ್ನುಪ್ರಸಾದ್‌ ಉಲ್ಲೇಖಿಸಿದ್ದಾರೆ.

ಲಸಿಕೆ ಪಡೆಯುವುದು ಮತ್ತು ಮಾಸ್ಕ್ ಬಳಸುವುದನ್ನು ಕಡ್ಡಾಯಗೊಳಿಸಿರುವ ಕೆನಡಾಸರ್ಕಾರ, ಲಾಕ್‌ಡೌನ್ ಸೇರಿದಂತೆ ಇತರ ನಿರ್ಬಂಧಗಳನ್ನೂ ಜಾರಿಗೊಳಿಸಿದೆ. ಇದರ ವಿರುದ್ಧ ಎರಡು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ.

ರಾಜಧಾನಿಒಟ್ಟಾವಾದ ರಾಷ್ಟ್ರೀಯ ಯುದ್ಧ ಸ್ಮಾರಕ ಮೈದಾನದಲ್ಲಿ ಸಾವಿರಾರು ಜನ ಜಮಾಯಿಸಿ, ಸರ್ಕಾರ ಮತ್ತು ಪ್ರಧಾನಿ ಟ್ರುಡೊ ವಿರುದ್ಧ ಘೋಷಣೆಗಳನ್ನುಕೂಗುತ್ತಿದ್ದಾರೆ.ಕೆಲವು ಪ್ರತಿಭಟನಾಕಾರರು ಕೋವಿಡ್‌ ನಿರ್ಬಂಧಗಳನ್ನು ಫ್ಯಾಸಿಸಂಗೆ (ನಿರಂಕುಶ ಪ್ರಭುತ್ವಕ್ಕೆ) ಹೋಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT