ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಡೆಕ್ಸ್‌ ಕಂಪನಿ ಗುಂಡಿನ ದಾಳಿ; ನಾಲ್ವರು ಸಿಖ್ಖರ ಸಾವು

Last Updated 17 ಏಪ್ರಿಲ್ 2021, 8:35 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಇಂಡಿಯಾನಾಪೊಲೀಸ್‌ನಲ್ಲಿನ ಫೆಡೆಕ್ಸ್‌ ಕಂಪನಿಯ ಸಮೀಪ ನಡೆದ ಗುಂಡಿನ ದಾಳಿಯಲ್ಲಿ ಸಾವಿಗೀಡಾದ 8 ಮಂದಿಯಲ್ಲಿ ನಾಲ್ವರು ಸಿಖ್‌ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಅಮೆರಿಕದಲ್ಲಿ ಹೆಚ್ಚುತ್ತಿರುವ ದ್ವೇಷ ಅಪರಾಧ ಮತ್ತು ಗುಂಡಿನ ದಾಳಿಯನ್ನು ನಿಯಂತ್ರಿಸುವಂತೆ ಭಾರತ ಮೂಲದ ನಾಯಕರು, ಅಧ್ಯಕ್ಷ ಜೋ ಬೈಡನ್‌ ಅವರಿಗೆ ಮನವಿ ಮಾಡಿದ್ದಾರೆ.

ಗುರುವಾರ ತಡರಾತ್ರಿ ವ್ಯಕ್ತಿಯೊಬ್ಬ ಫೆಡೆಕ್ಸ್‌ ಕಂಪನಿಯ ಸಮೀಪ ಗುಂಡಿನ ದಾಳಿ ನಡೆಸಿದ್ದ. ಆರೋಪಿಯನ್ನು 19 ವರ್ಷದ ಬ್ರ್ಯಾಡನ್‌ ಸ್ಕಾಟ್‌ ಹೋಲ್‌ ಎಂದು ಗುರುತಿಸಲಾಗಿದೆ. ಈತ ಗುಂಡಿನ ದಾಳಿ ನಡೆಸಿದ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಎನ್ನಲಾಗಿದೆ.

ಬ್ರ್ಯಾಡನ್‌ ಫ್ರೆಡೆಕ್ಸ್‌ನ ಮಾಜಿ ಉದ್ಯೋಗಿಯಾಗಿದ್ದು, 2020ರಲ್ಲಿ ಈತ ಫೆಡೆಕ್ಸ್‌ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿದ್ದ.

ಇಂಡಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ–ಅಮೆರಿಕನ್‌ ಉದ್ಯೋಗಿಗಳಿದ್ದಾರೆ. ಫೆಡೆಕ್ಸ್‌ ಕಂಪನಿಯಲ್ಲೂ ಶೇಕಡ 90ರಷ್ಟು ಉದ್ಯೋಗಿಗಳು ಭಾರತೀಯ ಅಮೆರಿಕನ್ನರಾಗಿದ್ದಾರೆ. ಹೆಚ್ಚಿನವರು ಸಿಖ್‌ ಸಮುದಾಯಕ್ಕೆ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT