ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್ ಲೇಖಕಿ ಅನಿ ಆ್ಯನೊಗೆ ನೊಬೆಲ್‌ ಗೌರವ

Last Updated 6 ಅಕ್ಟೋಬರ್ 2022, 15:38 IST
ಅಕ್ಷರ ಗಾತ್ರ

ಸ್ಟಾಕ್‌ಹೋಮ್‌: ಫ್ರೆಂಚ್‌ ಲೇಖಕಿ ಅನಿ ಆ್ಯನೊ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಈ ವರ್ಷದ ನೊಬೆಲ್‌ ಪುರಸ್ಕಾರ ಒಲಿದಿದೆ.

ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸ್ವೀಡನ್‌ ಅಕಾಡೆಮಿಯ ಆಜೀವ ಕಾರ್ಯದರ್ಶಿ ಮ್ಯಾಟ್ಸ್‌ ಮಲ್ಮ್‌ ಅವರು 81 ವರ್ಷದ ಆ್ಯನೊ ಹೆಸರನ್ನು ಪ್ರಕಟಿಸಿದರು.

‘ಅನಿ ಅವರ ಬರಹಗಳಲ್ಲಿ ವಸ್ತುನಿಷ್ಠತೆ ಹಾಗೂ ಭಾವ ತೀವ್ರತೆಯನ್ನು ಕಾಣಬಹುದು. ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ, ಗರ್ಭಪಾತ, ಅನಾರೋಗ್ಯ ಹಾಗೂ ತನ್ನ ಪಾಲಕರ ಸಾವಿನ ನಂತರ ಅನುಭವಿಸಿದ ಯಾತನೆಗಳನ್ನು ಅವರು ತಮ್ಮ ಕೃತಿಗಳಲ್ಲಿ ಹಿಡಿದಿಟ್ಟಿದ್ದಾರೆ’ ಎಂದು ನೊಬೆಲ್‌ ಸಮಿತಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT