ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿಗೆ ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ ಸಿದ್ಧ: ಪೀಯೂಷ್

Last Updated 27 ಮೇ 2022, 14:14 IST
ಅಕ್ಷರ ಗಾತ್ರ

ಲಂಡನ್(ಪಿಟಿಐ): ಭಾರತ ಮತ್ತು ಬ್ರಿಟನ್ ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು(ಎಫ್‌ಟಿಎ) ದೀಪಾವಳಿ ವೇಳೆಗೆ ಸಿದ್ಧವಾಗಲಿದೆ ಎಂದು ಭಾರತದ ವಾಣಿಜ್ಯ ಹಾಗೂ ಕೈಗಾರಿಕೆ ಸಚಿವ ಪೀಯೂಷ್ ಗೋಯೆಲ್ಅವರು ಹೇಳಿದ್ದಾರೆ.

ಮುಕ್ತ ವ್ಯಾಪಾರಕ್ಕೆ ಸಂಬಂಧಿಸಿ ಉಭಯ ದೇಶಗಳ ನಡುವೆ4ನೇ ಸಭೆಯು ಜೂ.13ರಂದು ಬ್ರಿಟನ್‌ನಲ್ಲಿ ನಿಗದಿಯಾಗಿದೆ. ಹೀಗಾಗಿ ಈ ಸಂಬಂಧ ಉದ್ಯಮಿಗಳು ಮತ್ತು ಮುಕ್ತ ವ್ಯಾಪಾರಕ್ಕೆ ಸಂಬಂಧಿಸಿದವರ ಜೊತೆ ಮಾತುಕತೆ ನಡೆಸಲು ಪೀಯೂಷ್ ಅವರು ದಾವೋಸ್‌ನಿಂದ ನೇರವಾಗಿ ಲಂಡನ್‌ಗೆ ಬಂದಿಳಿದರು.

ಈ ವೇಳೆ ಮಾತನಾಡಿದ ಅವರು, ಎಫ್‌ಟಿಎ ಕುರಿತ ವಿಚಾರಗಳು ಪ್ರಗತಿಯ ಹಂತದಲ್ಲಿವೆ. ದೀಪಾವಳಿ ವೇಳೆಗೆ ನಾವು ಬ್ರಿಟನ್ ಜೊತೆಗೆ ಪೂರ್ಣ ಪ್ರಮಾಣದ ಮುಕ್ತ ವ್ಯಾಪಾರ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT