ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಕ್ರೋಸಾಫ್ಟ್ ಮಹಿಳಾ ಉದ್ಯೋಗಿಯೊಂದಿಗೆ ಗೇಟ್ಸ್ ಸಂಬಂಧ: ವರದಿ

Last Updated 17 ಮೇ 2021, 11:58 IST
ಅಕ್ಷರ ಗಾತ್ರ

ವಾಷಿಂಗ್ಟನ್: ಜಗತ್ತಿನ ಶ್ರೀಮಂತ ಉದ್ಯಮಿ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಮಹಿಳಾ ಉದ್ಯೋಗಿಯೊಂದಿಗಿನ ಸಂಬಂಧದ ಬಗ್ಗೆ ಮಂಡಳಿಯು ತನಿಖೆ ನಡೆಸಿದ್ದರ ಪರಿಣಾಮ 2020ರಲ್ಲಿ ಮೈಕ್ರೋಸಾಫ್ಟ್ ನಿರ್ದೇಶಕರ ಮಂಡಳಿಯನ್ನು ತೊರೆದಿದ್ದರು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಇದರೊಂದಿಗೆ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ದಂಪತಿ 27 ವರ್ಷಗಳ ಬಳಿಕ ವಿಚ್ಛೇದನ ಪಡೆದುಕೊಂಡಿರುವುದಕ್ಕೆ ಸಂಬಂಧಿಸಿದಂತೆ ಮತ್ತಷ್ಟು ವರದಿಗಳು ಹೊರಬಂದಿವೆ.

ಅಮೆರಿಕದ ತಂತ್ರಜ್ಞಾನ ದೈತ್ಯ ಮೈಕ್ರೋಸಾಫ್ಟ್ ನಿರ್ದೇಶಕರಮಂಡಳಿ ಸ್ಥಾನವನ್ನು 2020 ಮಾರ್ಚ್ ತಿಂಗಳಲ್ಲಿ ಬಿಲ್ ಗೇಟ್ಸ್ ತ್ಯಜಿಸಿದ್ದರು.

ಮಹಿಳಾ ಉದ್ಯೋಗಿಯೊಂದಿಗೆ ಬಿಲ್ ಗೇಟ್ಸ್ ಪ್ರಣಯ ಸಂಬಂಧದ ಬಗ್ಗೆ ತನಿಖೆ ನಡೆಸಿದ್ದ ಮೈಕ್ರೋಸಾಫ್ಟ್ ಮಂಡಳಿಯ ಸದಸ್ಯರು 2020ರಲ್ಲಿ ಬಿಲ್ ಗೇಟ್ಸ್ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಸೂಚಿಸಿದ್ದರು ಎಂದು ವರದಿಯು ಹೇಳಿದೆ.

ಎಂಜಿನಿಯರ್ ಉದ್ಯೋಗಿ ಹಲವು ವರ್ಷಗಳಿಂದ ಬಿಲ್ ಗೇಟ್ಸ್ ಅವರೊಂದಿಗೆ ಲೈಂಗಿಕ ಸಂಬಂಧವನ್ನು ಬೆಳೆಸಿದ್ದರು ಎಂದು ಪತ್ರದಲ್ಲಿ ದೂರಲಾಗಿದೆ ಎಂದು ಜರ್ನಲ್ ತಿಳಿಸಿದೆ.

ಇದು ಸುಮಾರು 20 ವರ್ಷಗಳ ಹಿಂದೆ ಸೌಹಾರ್ದಯುತವಾಗಿ ಬಗೆಹರಿದ ಸಂಬಂಧವಾಗಿದೆ. ಬಿಲ್ ಗೇಟ್ಸ್ ತಮ್ಮ ಸಹಾಯಾರ್ಥ ಮತ್ತು ಮೆಲಿಂಡಾ ಫೌಂಡೇಷನ್ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಲು ಮೈಕ್ರೋಸಾಫ್ಟ್ ತೊರೆದಿದ್ದರು ಎಂದು ಗೇಟ್ಸ್ ವಕ್ತಾರೆ ತಿಳಿಸಿದ್ದಾರೆ.

ಜಾಗತಿಕ ಬಡತನ ಹಾಗೂ ರೋಗಗಳ ವಿರುದ್ಧ ಹೋರಾಡಲು ಎರಡು ದಶಕಗಳ ಹಿಂದೆ ಬಿಲ್ ಗೇಟ್ಸ್ ಹಾಗೂ ಮೆಲಿಂಡಾ ದಂಪತಿ ಫೌಂಡೇಷನ್ ಪ್ರಾರಂಭಿಸಿದ್ದರು.

1975ನೇ ಇಸವಿಯಲ್ಲಿ ಮೈಕ್ರೋಸಾಫ್ಟ್ ಸಂಸ್ಥೆಯನ್ನು ಸ್ಥಾಪಿಸಿದ ಗೇಟ್ಸ್, 2000ನೇ ಇಸವಿಯಲ್ಲಿಫೌಂಡೇಷನ್ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸುವ ಸಲುವಾಗಿ ಕಂಪನಿಯ ಸಿಇಒ ಹುದ್ದೆಯಿಂದ ಕೆಳಗಿಳಿದರು. ಬಳಿಕ 2008ರಲ್ಲಿ ಮೈಕ್ರೋಸಾಫ್ಟ್‌ನಿಂದ ಪೂರ್ಣ ಪ್ರಮಾಣದ ಹುದ್ದೆಯನ್ನು ತೊರೆದರು. 2020ರಲ್ಲಿಕಂಪನಿಯ ನಿರ್ದೇಶಕರ ಮಂಡಳಿಯಿಂದ ಹೊರನಡೆಯುವುದರೊಂದಿಗೆ ಸಂಸ್ಥೆಯೊಂದಿಗಿನ ಕೊನೆಯ ಅಧಿಕೃತ ಕೊಂಡಿಯು ಕಳಚಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT