ಗುರುವಾರ , ಅಕ್ಟೋಬರ್ 29, 2020
26 °C

Covid-19 World Update: ಜಗತ್ತಿನಾದ್ಯಂತ 9.95 ಲಕ್ಷಕ್ಕೂ ಹೆಚ್ಚು ಸಾವು

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Covid-19

ವಿಶ್ವಸಂಸ್ಥೆ: ಕೊರೊನಾ ವೈರಸ್ ಸಾಂಕ್ರಾಮಿಕ ನಿಯಂತ್ರಿಸುವ ನಿಟ್ಟಿನಲ್ಲಿ ವ್ಯಾಪಕವಾಗಿ ಲಸಿಕೆ ಹಾಕಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವ ವೇಳೆಗೆ ವಿಶ್ವದಾದ್ಯಂತ ಸಾವಿನ ಸಂಖ್ಯೆ 20 ಲಕ್ಷ ತಲುಪಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಧಿಕಾರಿ ಹೇಳಿದ್ದಾರೆ.

ಜಗತ್ತಿನಾದ್ಯಂತ 3.28 ಕೋಟಿಗೂ ಅಧಿಕ ಜನರು ಕೋವಿಡ್-19 ಸೋಂಕಿಗೆ ಒಳಗಾಗಿದ್ದರೆ, 9.95 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿರುವುದು ವರ್ಡೊ ಮೀಟರ್‌ ವೆಬ್‌ಸೈಟ್‌ನಿಂದ ತಿಳಿದು ಬಂದಿದೆ.

ಈವರೆಗೂ 2,42,60,574 ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 76,29,937 ಕೊರೊನಾ ಪ್ರಕರಣಗಳು ಸಕ್ರಿಯವಾಗಿವೆ.

‘20 ಲಕ್ಷ ಸಾವು ಸಂಭವಿಸುವ ಸಾಧ್ಯತೆ ಇದೆ. ಇದು ಊಹಿಸಲು ಅಸಾಧ್ಯವಾದದ್ದು. ಬಹಳ ಬೇಸರದ ವಿಷಯವೆಂದರೆ, ಇದು ಸಂಭವಿಸುವ ಸಾಧ್ಯತೆಯೇ ಹೆಚ್ಚು’ ಎಂದು ಆರೋಗ್ಯ ಸಂಸ್ಥೆಯ ತುರ್ತು ಕಾರ್ಯಕ್ರಮ ವಿಭಾಗದ ಮುಖ್ಯಸ್ಥೆ ಮೈಕ್ ರಯಾನ್ ಹೇಳಿದ್ದಾರೆ.

ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕದಲ್ಲಿ 72,53,443 ಜನರಿಗೆ ಕೋವಿಡ್-19 ದೃಢಪಟ್ಟಿದೆ. ಸದ್ಯ 2,08,652 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 44,84,953 ಜನರು ಈ ವರೆಗೆ ಚೇತರಿಸಿಕೊಂಡಿದ್ದಾರೆ.

ಭಾರತದಲ್ಲಿ 59,54,932, ಬ್ರೆಜಿಲ್‌ನಲ್ಲಿ 46,92,579, ರಷ್ಯಾದಲ್ಲಿ 11,43,571, ದಕ್ಷಿಣ ಆಫ್ರಿಕಾದಲ್ಲಿ 6,68,529, ಪೆರುವಿನಲ್ಲಿ 7,94,584, ಕೊಲಂಬಿಯಾದಲ್ಲಿ 7,98,317, ಚಿಲಿಯಲ್ಲಿ 4,55,979, ಇರಾನ್‌ನಲ್ಲಿ 4,43,086, ಇಂಗ್ಲೆಂಡ್‌ನಲ್ಲಿ 4,29,277 ಮತ್ತು ಸ್ಪೇನ್‌ನಲ್ಲಿ 7,35,198 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು