ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಜಗತ್ತಿನ 6ನೇ ಶ್ರೀಮಂತ ಸೆರ್ಗೆಯ್ ಬ್ರಿನ್

ಅಕ್ಷರ ಗಾತ್ರ

ಕ್ಯಾಲಿಫೊರ್ನಿಯಾ: ಗೂಗಲ್ ಸಂಸ್ಥೆಯ ಸಹ ಸಂಸ್ಥಾಪಕ ಮತ್ತು ಜಗತ್ತಿನ 6ನೇ ಶ್ರೀಮಂತ ಸೆರ್ಗೆಯ್ ಬ್ರಿನ್ ತಮ್ಮ ಪತ್ನಿಯಿಂದ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಬ್ರಿನ್ ಮತ್ತು ಪತ್ನಿ ನಿಕೊಲ್ ಶನಹನ್ ನಡುವೆ ಸರಿಪಡಿಸಲಾಗದಂತಹ ಭಿನ್ನಾಭಿಪ್ರಾಯಗಳು ಬಂದಿರುವುದರಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ಕ್ಯಾಲಿಫೊರ್ನಿಯಾದ ಸಾಂತ ಕಾರ್ಲಾ ನ್ಯಾಯಾಲಯದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ದಂಪತಿಗೆ 3 ವರ್ಷದ ಮಗನಿದ್ದಾನೆ.

ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್ ಪ್ರಕಾರ, 48 ವರ್ಷದ ಬ್ರಿನ್ 94 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಇದರಲ್ಲಿ ಅತಿ ಹೆಚ್ಚಿನ ಸಂಪತ್ತು ಗೂಗಲ್ ಷೇರಿನದ್ದಾಗಿದೆ.

ಈ ಮೊದಲು ಗೂಗಲ್ ಸಹ-ಸಂಸ್ಥಾಪಕಿ ಅನ್ನಿ ವೊಜ್ಸಿಕಿ ಅವರನ್ನು ವಿವಾಹವಾಗಿದ್ದ ಬ್ರಿನ್ 2015 ರಲ್ಲಿ ವಿಚ್ಛೇದನ ಪಡೆದಿದ್ದರು.

ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಫ್ರೆಂಚ್ ಗೇಟ್ಸ್ ತಮ್ಮ ವಿವಾಹ ವಿಚ್ಛೇದನ ಘೋಷಿಸಿದ ಒಂದು ವರ್ಷದ ನಂತರ ಮತ್ತು ಜೆಫ್ ಬೆಜೋಸ್ ಮತ್ತು ಮ್ಯಾಕೆಂಜಿ ಸ್ಕಾಟ್ ವಿಚ್ಛೇದನದ ಮೂರು ವರ್ಷಗಳ ನಂತರ ಮತ್ತೊಬ್ಬ ಬಿಲಿಯನೇರ್ ಬ್ರಿನ್ ವಿಚ್ಛೇದನಕ್ಕೆ ಮುಂದಾಗಿದ್ದಾರೆ.

ಜೆಫ್ ಬೆಜೋಸ್ ವಿಚ್ಛೇದನದಲ್ಲಿ ಸಂದರ್ಭದಲ್ಲಿ 38 ಬಿಲಿಯನ್ ಡಾಲರ್ ಸಂಪತ್ತನ್ನು ಪತ್ನಿಗೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT