ಬುಧವಾರ, ಜೂನ್ 29, 2022
23 °C

ದಕ್ಷಿಣ ಚೀನಾದಲ್ಲಿ ಭಾರಿ ಮಳೆ: 15 ಸಾವು

ಎಪಿ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್: ದಕ್ಷಿಣ ಚೀನಾದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಸಂಬಂಧಿತ ಅವಘಡಗಳಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಹಾಗೂ ಮೂವರು ನಾಪತ್ತೆಯಾಗಿದ್ದಾರೆ. 

ಚೀನಾದ ಪೂರ್ವ ಕರಾವಳಿಯ ಫುಜಿಯಾನ್ ಪ್ರಾಂತ್ಯದಲ್ಲಿ ಮಳೆಯಿಂದ ಭೂಕುಸಿತ ಉಂಟಾಗಿದ್ದು, 2 ಕಟ್ಟಡಗಳು ಉರುಳಿಬಿದ್ದಿವೆ. ಈ ಘಟನೆಗಳಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಯುನ್ನನ್ ಪ್ರಾಂತ್ಯದಲ್ಲಿ ಐವರು ಮೃತಪಟ್ಟಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ‘ಸಿಸಿಟಿವಿ’ ವರದಿ ಮಾಡಿದೆ. 

ಇನ್ನು ಗುವಾಂಗ್‌ಕ್ವಿ ಪ್ರಾಂತ್ಯದ ಕ್ಸಿಂಚೆಂಗ್ ಕೌಂಟಿಯಲ್ಲಿ ಶುಕ್ರವಾರ ಪ್ರವಾಹದ ನೀರಿನಲ್ಲಿ ಕೊಚ್ಚಿಹೋದ ಮೂವರು ಮಕ್ಕಳ ಪೈಕಿ ಇಬ್ಬರು ಮೃತಪಟ್ಟಿದ್ದು, ಒಂದು ಮಗುವನ್ನು ರಕ್ಷಿಸಲಾಗಿದೆ. 

ಯುನ್ನಾನ್‌ನ ಕ್ಯುಬೆ ಕೌಂಟಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳು, ಸೇತುವೆಗಳು, ದೂರಸಂಪರ್ಕಗಳು ಮತ್ತು  ವಿದ್ಯುತ್ ಸೌಕರ್ಯಗಳಿಗೆ ಹಾನಿಯಾಗಿದೆ. ಚೀನಾದ ಹಲವು ಭಾಗಗಳಲ್ಲಿ ಗುರುವಾರದಿಂದ ಭಾರಿ ಪ್ರಮಾಣದ ಮಳೆ ಸುರಿಯುತ್ತಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು