ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈರುತ್ಯ ಜಪಾನ್‌ನಲ್ಲಿ ಭಾರಿ ಮಳೆ, ಭೂ ಕುಸಿತ; ವ್ಯಕ್ತಿ ಸಾವು, ಇಬ್ಬರು ನಾಪತ್ತೆ

ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ
Last Updated 14 ಆಗಸ್ಟ್ 2021, 8:04 IST
ಅಕ್ಷರ ಗಾತ್ರ

ಟೋಕಿಯೊ: ನೈರುತ್ಯ ಜಪಾನ್‌ನಲ್ಲಿ ಶನಿವಾರ ಸುರಿದ ಧಾರಾಕಾರ ಮಳೆ ಹಾಗೂ ಪ್ರವಾಹದಿಂದಾಗಿ ನೂರಾರು ಮನೆಗಳು ಕೊಚ್ಚಿ ಹೋಗಿವೆ, ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಭಾರಿ ಮಳೆಯಿಂದಾಗಿ ಶುಕ್ರವಾರ ಸಂಭವಿಸಿದ ಭೂ ಕುಸಿತದಲ್ಲಿ ಒಬ್ಬ ವ್ಯಕ್ತಿ ಸತ್ತಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. ಟೋಕಿಯೊ ನಗರದ ದಕ್ಷಿಣ ಭಾಗದಲ್ಲಿರುವ ಕುರುಮೆಯಲ್ಲಿ ನದಿಗಳು ಉಕ್ಕಿ ಹರಿಯುತ್ತಿವೆ. ನದಿ ಪಾತ್ರದಲ್ಲಿದ್ದ ಜನರನ್ನು ಬೋಟ್‌ಗಳ ಸಹಾಯದಿಂದ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಕೆಸರು ನೀರಿನಲ್ಲಿ ಸಿಲುಕಿದ್ದವರನ್ನು ಪರಿಹಾರ ಕಾರ್ಯಪಡೆಯವರು ರಕ್ಷಿಸಿದ್ದಾರೆ.

ದಕ್ಷಿಣ ಜಪಾನ್‌ನಲ್ಲಿ ಈ ವಾರ ಭಾರಿ ಮಳೆಯಾಗಿದೆ. ಜಪಾನ್‌ ಹವಾಮಾನ ಸಂಸ್ಥೆ ಪ್ರಕಾರ, ದ್ವೀಪ ಸಮೂಹದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಹಿರೋಶಿಮಾ ಸೇರಿದಂತೆ, ಕ್ಯೂಶು ವಲಯ ಹಾಗೂ ಜಪಾನ್‌ನ ಇತರ ಭಾಗಗಳಲ್ಲಿ ಮಳೆಯಾಗುವ ಹಾಗೂ ಭೂ ಕುಸಿತ ಸಂಭವಿಸುವ ಸಾಧ್ಯತೆ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಧ್ಯ ಜಪಾನ್‌ನ ಹಿಂದಿನ ರಾಜಧಾನಿ ಕ್ಯೂಟೊ ಮತ್ತು ನಾಗಾವೊದಲ್ಲಿ ಭಾರಿ ಮಳೆಯಾಗುತ್ತಿದ್ದು, ಈಗ ಮಾರುತಗಳು ನಿಧಾನವಾಗಿ ಪೂರ್ವಕ್ಕೆ ಚಲಿಸುತ್ತಿವೆ‘ ಎಂದು ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT