ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್: ಉಸ್ತುವಾರಿ ಪ್ರಧಾನಿ ನೇಮಕಕ್ಕೆ ಚಾಲನೆ

Last Updated 4 ಏಪ್ರಿಲ್ 2022, 19:05 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಉಸ್ತುವಾರಿ ಪ್ರಧಾನಿ ನೇಮಕ ಪ್ರಕ್ರಿಯೆಗೆ ಸೋಮವಾರ ಚಾಲನೆ ಸಿಕ್ಕಿದೆ.ಪ್ರಧಾನಿ ಇಮ್ರಾನ್ ಖಾನ್ ಅವರು,ಉಸ್ತುವಾರಿ ಪ್ರಧಾನಿ ಹುದ್ದೆಗೆ ಮಾಜಿ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹಮದ್ ಅವರನ್ನು ಸೋಮವಾರ ನಾಮನಿರ್ದೇಶನ ಮಾಡಿದ್ದಾರೆ.

ಉಸ್ತುವಾರಿ ಪ್ರಧಾನಿ ಹುದ್ದೆಗೆ ಹೆಸರು ಸೂಚಿಸುವಂತೆ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ಅವರು ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪ್ರತಿಪಕ್ಷದ ಮುಖ್ಯಸ್ಥ ಶಹಬಾಝ್‌ಶರೀಫ್ ಅವರಿಗೆ ಸೂಚಿಸಿದ್ದರು. ಆದರೆ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಶಹಬಾಝ್‌ ಅವರು ನಿರಾಕರಿಸಿದ್ದು, ಇದು ಅಕ್ರಮ ಎಂದು ಪ್ರತಿಪಾದಿಸಿದ್ದಾರೆ.

ಪ್ರಧಾನಿ ಹಾಗೂ ಪ್ರತಿಪಕ್ಷದ ಮುಖ್ಯಸ್ಥರ ಜತೆ ಸಮಾಲೋಚನೆ ನಡೆಸಿ ಉಸ್ತುವಾರಿ ಪ್ರಧಾನಿಯನ್ನು ನೇಮಕ ಮಾಡುವ ಅಧಿಕಾರವನ್ನು ಪಾಕಿಸ್ತಾನದ ಸಂವಿಧಾನವು ಅಲ್ಲಿನ ಅಧ್ಯಕ್ಷರಿಗೆ ಒದಗಿಸಿದೆ. ಸಂವಿಧಾನದ 224ಎ(1)ರ ಪ್ರಕಾರ,ಉಸ್ತುವಾರಿ ಸರ್ಕಾರವು ಚುನಾವಣೆಯನ್ನು ಆಯೋಜಿಸುತ್ತದೆ.

ಉಸ್ತುವಾರಿ ಪ್ರಧಾನಿ ನೇಮಕ ಆಗುವವರೆಗೂ ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ ಎಂದು ಅಧ್ಯಕ್ಷ ಅಲ್ವಿ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT