ಸೋಮವಾರ, ಮೇ 23, 2022
22 °C

ಸದ್ಯ ಇಮ್ರಾನ್ ಖಾನ್ ಅವರೇ ಪ್ರಧಾನಿಯಾಗಿರುತ್ತಾರೆ: ಪಾಕ್ ಅಧ್ಯಕ್ಷ ಅಲ್ವಿ

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್: ಮೈತ್ರಿಪಕ್ಷಗಳ ಅವಕೃಪೆಗೆ ಪಾತ್ರವಾಗಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ದಾರಿ ಕಾಣದೇ ಸಂಸತ್ತನ್ನು ವಿಸರ್ಜಿಸಿದ್ದಾರೆ.

ಇದರ ಬೆನ್ನಲ್ಲೇ ಪಾಕಿಸ್ತಾನದ ಅಧ್ಯಕ್ಷ ಆರೀಪ್ ಅಲ್ವಿ ಅವರು ಹೊಸ ಸುತ್ತೋಲೆ ಹೊರಡಿಸಿದ್ದು, ಹಂಗಾಮಿ ಪ್ರಧಾನಿ ಹೆಸರನ್ನು ಘೋಷಿಸುವವರೆಗೂ ಇಮ್ರಾನ್ ಖಾನ್ ಅವರೇ ಪ್ರಧಾನಿಯಾಗಿರುತ್ತಾರೆ ಎಂದು ಹೇಳಿದ್ದಾರೆ.

ತಕ್ಷಣದಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ಆರೀಪ್ ಅಲ್ವಿ ಹೇಳಿದ್ದಾರೆ. ಪಾಕಿಸ್ತಾನದ ಸಂವಿಧಾನದ 94 ನೇ ವಿಧಿಯಲ್ಲಿ ಈ ಅವಕಾಶವಿದ್ದು, ಅಧ್ಯಕ್ಷರು ಹಂಗಾಮಿ ಪ್ರಧಾನಿ ನೇಮಿಸುವವರೆಗೂ ನಿಕಟಪೂರ್ವ ಪ್ರಧಾನಿಯೇ ಪ್ರಧಾನ ಮಂತ್ರಿಯಾಗಿರುತ್ತಾರೆ.

ಮೈತ್ರಿಕೂಟದ ಕೆಲ ಪಕ್ಷಗಳು ಖಾನ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಆದರೆ ಇದಕ್ಕೆ ಉಪ ಸಭಾಪತಿ ಖಾಸಿಮ್ ಸೂರಿ ಸೊಪ್ಪು ಹಾಕಿರಲಿಲ್ಲ. ಇದರಿಂದ ಸಂಸತ್ತನ್ನು ವಿಸರ್ಜಿಸುವಂತೆ ಅಧ್ಯಕ್ಷರಿಗೆ ಇಮ್ರಾನ್ ಖಾನ್ ಸಲಹೆ ನೀಡಿದ್ದರು.

ಪಾಕಿಸ್ತಾನದ ಇಂದಿನ ರಾಜಕೀಯ ಘಟನೆಗಳಿಗೆ ಅಮೆರಿಕ ಹಾಗೂ ಕೆಲ ಪಾಶ್ಚಿಮಾತ್ಯ ದೇಶಗಳ ಕೈವಾಡ ಇದೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು