ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮತ್ತು ಜಪಾನ್ ಸಹಜ ಪಾಲುದಾರ ದೇಶಗಳು: ಮೋದಿ

Last Updated 23 ಮೇ 2022, 16:22 IST
ಅಕ್ಷರ ಗಾತ್ರ

ಟೋಕಿಯೊ: ಭಾರತ ಮತ್ತು ಜಪಾನ್ ಸಹಜ ಪಾಲುದಾರ ದೇಶಗಳು, ಭಾರತದ ಬೆಳವಣಿಗೆಯ ಹಾದಿಯಲ್ಲಿ ಜಪಾನ್‌ನ ಹೂಡಿಕೆಗಳು ಮಹತ್ವದ ಪಾತ್ರ ವಹಿಸಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

ಎರಡು ದಿನಗಳ ಜಪಾನ್ ಪ್ರವಾಸದ ಮೊದಲ ದಿನ ಟೋಕಿಯೊದಲ್ಲಿ ಭಾರತೀಯ ಸಮುದಾಯವನ್ನುಉದ್ದೇಶಿಸಿ ಮಾತನಾಡಿದ ಅವರು, ‘ಭಗವಾನ್ ಬುದ್ಧ ತೋರಿದ ಹಾದಿಯಲ್ಲಿ ಇಂದಿನ ಜಗತ್ತು ಸಾಗಬೇಕಾದ ಅಗತ್ಯವಿದೆ. ಭಯೋತ್ಪಾದನೆ, ಅರಾಜಕತೆ, ಹಿಂಸಾಚಾರ, ಪ್ರಾಕೃತಿಕ ಬದಲಾವಣೆ ಮುಂತಾದ ಜಗತ್ತು ಎದುರಿಸುತ್ತಿರುವ ಸವಾಲುಗಳ ನಡುವೆ ಮಾನವೀಯತೆಯನ್ನು ಕಾಪಾಡಲು ಇರುವ ಮಾರ್ಗ ಇದಾಗಿದೆ’ಎಂದು ಹೇಳಿದರು.

ಸಮಸ್ಯೆ ಎಷ್ಟೇ ದೊಡ್ಡದಿರಲಿ. ಭಾರತವು ಅದಕ್ಕೆ ಪರಿಹಾರ ಕಂಡುಹಿಡಿಯುತ್ತದೆ ಎಂದು ಮೋದಿ ಹೇಳಿದರು. ಕೊರೊನಾ ವೈರಸ್‌ ಉತ್ತುಂಗದಲ್ಲಿದ್ದ ಕಾಲದ ಬಗ್ಗೆ ಮಾತನಾಡಿದ ಅವರು, ಅಂತಹ ಅನಿಶ್ಚಿತ ಪರಿಸ್ಥಿತಿಯಲ್ಲೂ ಭಾರತವು ತನ್ನ ಕೋಟ್ಯಂತರ ನಾಗರಿಕರಿಗೆ ಮೇಡ್ ಇಂಡಿಯಾ ಲಸಿಕೆ ನೀಡಿದೆ. ಜೊತೆಗೆ, ನೂರಾರು ದೇಶಗಳಿಗೂ ರಫ್ತು ಮಾಡಿದೆ ಎಂದರು.

'ನಾನು ಪ್ರತೀ ಬಾರಿ ಜಪಾನ್‌ಗೆ ಬಂದರೂ ನಿಮ್ಮ ಆತ್ಮೀಯ ಸ್ವಾಗತಕ್ಕೆ ಸಾಕ್ಷಿಯಾಗಿದ್ದೇನೆ. ನಿಮ್ಮಲ್ಲಿ ಹಲವರು ಬಹಳ ವರ್ಷಗಳಿಂದ ಜಪಾನ್‌ನಲ್ಲಿ ನೆಲೆಯೂರಿದ್ದೀರಿ. ಜಪಾನ್ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದೀರಿ. ಆದರೆ, ಈಗಲೂ ಭಾರತೀಯ ಸಂಸ್ಕೃತಿ ಮತ್ತು ಭಾಷೆ ಬಗ್ಗೆ ನಿಮ್ಮ ಸಮರ್ಪಣೆ ಬೆಳೆಯುತ್ತಲೇ ಇದೆ’ಎಂದು ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಹೇಳಿದರು. ಈ ಸಂದರ್ಭ ಭಾರತ್ ಮಾತಾಕೀ ಜೈ ಎಂಬ ಜಯಘೋಷ ಮೊಳಗಿತು.

ಕ್ವಾಡ್ ನಾಯಕರ ಶೃಂಗಕ್ಕಾಗಿ ಪ್ರಧಾನಿ ಮೋದಿ ಎರಡು ದಿನಗಳ ಜಪಾನ್ ಪ್ರವಾಸದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT