ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್‌ ಭದ್ರತೆ, ಭಯೋತ್ಪಾದನೆ ಕುರಿತು ಭಾರತದೊಂದಿಗೆ ಮತ್ತೆ ಮಾತುಕತೆ: ಅಮೆರಿಕ

ಅಮೆರಿಕದಲ್ಲಿನ ಭಾರತೀಯ ರಾಯಭಾರಿ ಜತೆ ಚರ್ಚೆ
Last Updated 24 ಮಾರ್ಚ್ 2021, 6:50 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತದ ಜತೆಗಿನ ಸಂಬಂಧವನ್ನು ಮತ್ತೆ ಆರಂಭಿಸುವುದಾಗಿ ಅಮೆರಿಕದ ಆಂತರಿಕ ಭದ್ರತಾ ಇಲಾಖೆ (ಡಿಎಚ್‌ಎಸ್‌) ಪ್ರಕಟಿಸಿದೆ.

ಇಲಾಖೆಯ ಕಾರ್ಯದರ್ಶಿ ಅಲೆಜಾಂಡ್ರೊ ಮಾಯೊರ್ಕಾಸ್‌ ಅವರು ಅಮೆರಿಕದಲ್ಲಿನ ಭಾರತದ ರಾಯಭಾರಿ ತಾರಾಂಜಿತ್‌ ಸಿಂಗ್‌ ಸಂಧು ಅವರ ಜತೆ ಮಾತುಕತೆ ನಡೆಸಿ ಭಾರತ ಮತ್ತು ಆಂತರಿಕ ಭದ್ರತಾ ಇಲಾಖೆ ಸಂಬಂಧಗಳನ್ನು ಬಲಪಡಿಸುವ ಕುರಿತು ಚರ್ಚಿಸಿದರು.

‘ಸೈಬರ್‌ ಭದ್ರತೆ, ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಮತ್ತು ಭಯೋತ್ಪಾದನೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಯೊರ್ಕಾಸ್‌ ಮತ್ತು ಸಂಧು ಸಮಾಲೋಚನೆ ನಡೆಸಿದರು ಎಂದು ಪ್ರಕಟಣೆ ತಿಳಿಸಿದೆ.

2011ರಲ್ಲಿ ಒಬಾಮ ಆಡಳಿತದಲ್ಲಿ ಮೊದಲ ಬಾರಿ ಭಾರತದ ಗೃಹ ಇಲಾಖೆ ಮತ್ತು ಅಮೆರಿಕದ ಆಂತರಿಕ ಭದ್ರತಾ ಇಲಾಖೆ ನಡುವೆ ಮಾತುಕತೆಗಳು ನಡೆದಿದ್ದವು. ಆಗ ಕಾರ್ಯದರ್ಶಿಯಾಗಿದ್ದ ಜಾನೆಟ್‌ ನೊಪೊಲಿಟಾನೊ ಅವರು ಭಾರತಕ್ಕೆ ಭೇಟಿ ನೀಡಿ ಭಾರತದ ಅಂದಿನ ಗೃಹ ಸಚಿವರಾಗಿದ್ದ ಪಿ. ಚಿದಂಬರಂ ಅವರ ಜತೆ ಮಾತುಕತೆ ನಡೆಸಿದ್ದರು. ನಂತರ 2013ರಲ್ಲಿ ನಾಪೊಲಿಟಾನೊ ಮತ್ತು ಅಂದಿನ ಗೃಹ ಸಚಿವ ಸುಶೀಲ್‌ ಕುಮಾರ್ ಶಿಂಧೆ‌ ನಡುವೆ ಮಾತುಕತೆಗಳು ನಡೆದಿದ್ದವು. ಆದರೆ, ಡೊನಾಲ್ಡ್‌ ಟ್ರಂಪ್‌ ಅವರ ಆಡಳಿತದಲ್ಲಿ ಈ ಸಂಬಂಧವನ್ನು ಸ್ಥಗಿತಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT