ಭಾನುವಾರ, ಜೂನ್ 13, 2021
26 °C

ಕೋವಿಡ್‌: ಭಾರತದ ತಪ್ಪು ಕಲ್ಪನೆಯಿಂದ ಈ ಪರಿಸ್ಥಿತಿ ಎದುರಾಗಿದೆ –ಡಾ.ಫೌಸಿ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ‘ಭಾರತವು ಕೋವಿಡ್ ಪಿಡುಗು ಅಂತ್ಯವಾಯಿತು ಎಂಬ ತಪ್ಪು ಕಲ್ಪನೆಯೊಂದಿಗೆ ಸಮಯಕ್ಕಿಂತ ಮೊದಲೇ ತನ್ನ ಎಲ್ಲಾ ಚಟುವಟಿಕೆಗಳನ್ನು ಪುನರಾರಂಭಿಸಿತು. ಇದರಿಂದಾಗಿ ಭಾರತ ಈ ಭೀಕರ ಪರಿಸ್ಥಿತಿಯನ್ನು ಎದುರಿಸುತ್ತಿದೆ’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೋನಿ ಫೌಸಿ ಅವರು ಹೇಳಿದರು.

ಕೋವಿಡ್‌–19 ಪ್ರತಿಕ್ರಿಯೆಯ ಕುರಿತಾಗಿ ಮಂಗಳವಾರ ನಡೆದ ಸಭೆಯಲ್ಲಿ ಫೌಸಿ ಅವರು ಈ ಬಗ್ಗೆ ಸೆನೆಟ್‌ನ ಆರೋಗ್ಯ, ಶಿಕ್ಷಣ,  ಕಾರ್ಮಿಕ ಮತ್ತು ಪಿಂಚಣಿ ಸಮಿತಿಗೆ ಈ ವಿಷಯ ತಿಳಿಸಿದರು.

‘ಭಾರತದ ಪರಿಸ್ಥಿತಿಯು ಚಿಂತಾಜನಕವಾಗಿದೆ. ವಿಶ್ವದಲ್ಲಿ ಕೋವಿಡ್‌ ಸಂಪೂರ್ಣವಾಗಿ ಅಂತ್ಯವಾಗುವವರೆಗೆ ಅಮೆರಿಕದಲ್ಲೂ ಈ ಪಿಡುಗು ಅಂತ್ಯವಾಗಲ್ಲ’ ಎಂದು ಅವರು ಹೇಳಿದರು. 

‘ವಿಶ್ವ ಆರೋಗ್ಯ ಸಂಸ್ಥೆಗೆ ಮರು ಸೇರ್ಪಡೆಯಾಗುವ ಮೂಲಕ ಬೈಡನ್‌ ಆಡಳಿತವು ಜಾಗತಿಕ ಹೋರಾಟದಲ್ಲಿ ಮುಂದಾಳತ್ವವನ್ನು ವಹಿಸಿದೆ. ಅಲ್ಲದೆ ಅಮೆರಿಕವು ಜುಲೈ 4ರೊಳಗೆ ಇತರೆ ದೇಶಗಳಿಗೆ 6 ಕೋಟಿ ಅಸ್ಟ್ರಾಜೆನಿಕಾ ಲಸಿಕೆಯನ್ನು ಕಳುಹಿಸಲಿದೆ’ ಎಂದು ಅವರು ತಿಳಿಸಿದರು.

‘ಯಾವತ್ತೂ ಪರಿಸ್ಥಿತಿಯನ್ನು ತುಂಬಾ ಹಗುರವಾಗಿ ತೆಗೆದುಕೊಳ್ಳಬಾರದು ಮತ್ತು ಭವಿಷ್ಯದ ಕೋವಿಡ್‌ ಅಲೆಗಳಿಗೆ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಪಾಠವನ್ನು ನಾವು ಭಾರತದ ಬಿಕ್ಕಟ್ಟಿನಿಂದ ಕಲಿಯಬಹುದು’ ಎಂದು ಸಂಸದರಿಗೆ ಫೌಸಿ ತಿಳಿಸಿದರು.

‘ಜಾಗತಿಕ ‍ಪಿಡುಗನ್ನು ನಾವು ಜಾಗತಿಕವಾಗಿ ಹೋರಾಡಬೇಕು. ರಾಷ್ಟ್ರಗಳು ಪರಸ್ಪರ ಸಹಾಯ ಮಾಡಬೇಕು. ಈ ಬಿಕ್ಕಟ್ಟನ್ನು ಒಟ್ಟಾಗಿ ಎದುರಿಸಬೇಕು’ ಎಂದು ಅವರು ಅಭಿ‍ಪ್ರಾಯಪಟ್ಟರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು