ಗುರುವಾರ , ಆಗಸ್ಟ್ 11, 2022
21 °C

ಬೌದ್ಧಿಕ ಆಸ್ತಿ ಹಕ್ಕು: ಅಮೆರಿಕ–ಭಾರತ ಒಪ‍್ಪಂದಕ್ಕೆ ಸಹಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಬೌದ್ಧಿಕ ಆಸ್ತಿ ಹಕ್ಕು ಪರೀಕ್ಷೆಗೆ ಸಂಬಂಧಿಸಿ ಪರಸ್ಪರ ಸಹಕಾರ ನೀಡುವ ಸಂಬಂಧ ಅಮೆರಿಕ ಹಾಗೂ ಭಾರತ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ.

ಈ ಹಕ್ಕಿನ ಆಧಾರದಲ್ಲಿ ಅಭಿವೃದ್ಧಿಪಡಿಸಲಾಗಿರುವ ಪೇಟೆಂಟ್‌, ಟ್ರೇಡ್‌ಮಾರ್ಕ್‌ಗಳು, ಭೌಗೋಳಿಕ ಸೂಚ್ಯಂಕಗಳು ಹಾಗೂ ಔದ್ಯಮಿಕ ವಿನ್ಯಾಸಗಳನ್ನು ಮುಂದಿನ ಹತ್ತು ವರ್ಷಗಳ ಕಾಲ ಸಂರಕ್ಷಿಸುವುದು ಸಹ ಈ ಒಪ್ಪಂದದ ಭಾಗವಾಗಿದೆ.

ಅಮೆರಿಕದ  ವಾಣಿಜ್ಯ ಮತ್ತು ಬೌದ್ಧಿಕ ಆಸ್ತಿ ಹಕ್ಕು ಇಲಾಖೆಯ ಕಾರ್ಯದರ್ಶಿ ಆಂಡ್ರೆ ಲ್ಯಾಂಕು ಹಾಗೂ ಭಾರತದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವಾಣಿಜ್ಯ ಉತ್ತೇಜನ ವಿಭಾಗದ ಕಾರ್ಯದರ್ಶಿ ಗುರುಪ್ರಸಾದ್‌ ಮಹಾಪಾತ್ರ ಅವರು ಆನ್‌ಲೈನ್‌ ಮೂಲಕ ನಡೆದ ಸಭೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದರು.

ಈ ಮೊದಲು ಇಂಥ ಒಪ್ಪಂದ ಇತ್ತಾದರೂ, ಅದು ಅಂತ್ಯಗೊಂಡು ಒಂಬತ್ತು ವರ್ಷಗಳು ಗತಿಸಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು