ಶುಕ್ರವಾರ, ಫೆಬ್ರವರಿ 3, 2023
15 °C

ಸ್ಥಗಿತಗೊಂಡಿದ್ದ ಯೋಜನೆಗಳಿಗೆ ಭಾರತದಿಂದ ಮರುಚಾಲನೆ: ತಾಲಿಬಾನ್‌ ವಿಶ್ವಾಸ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್‌: ಅಫ್ಗಾನಿಸ್ತಾನದ ಕೆಲ ಪ್ರಾಂತ್ಯಗಳಲ್ಲಿ ಸ್ಥಗಿತಗೊಂಡಿರುವ ಕನಿಷ್ಠ 20 ಯೋಜನೆಗಳನ್ನು ಭಾರತವು ಮತ್ತೆ ವಹಿಸಿಕೊಂಡು ಪೂರ್ಣಗೊಳಿಸಲಿದೆ ಎಂದು ತಾಲಿಬಾನ್ ಆಡಳಿತ ವಿಶ್ವಾಸ ವ್ಯಕ್ತಪಡಿಸಿದೆ.

2021ರ ಆಗಸ್ಟ್‌ನಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ಭದ್ರತೆಯ ಕಾರಣಕ್ಕೆ ಭಾರತ ತನ್ನ ಅಧಿಕಾರಿಗಳನ್ನು ರಾಯಭಾರಿ ಕಚೇರಿಯಿಂದ ಹಿಂದಕ್ಕೆ ಕರೆಸಿಕೊಂಡಿತ್ತು. ಆದರೆ ಈಗ ಜೂನ್‌ನಲ್ಲಿ ಕಾಬೂಲ್‌ನಲ್ಲಿರುವ ರಾಯಭಾರ ಕಚೇರಿಯಲ್ಲಿ ತಾಂತ್ರಿಕ ತಂಡವನ್ನು ನಿಯೋಜಿಸುವ ಮೂಲಕ ಭಾರತ ತನ್ನ ರಾಜತಾಂತ್ರಿಕ ಉಪಸ್ಥಿತಿಯನ್ನು ಮರುಸ್ಥಾಪಿಸಿದೆ.

ಭಾರತೀಯ ಪ್ರಭಾರ ಅಧಿಕಾರಿ ಭರತ್ ಕುಮಾರ್ ಅವರು ಅಫ್ಗಾನಿಸ್ತಾನದ ನಗರಾಭಿವೃದ್ಧಿ ಮತ್ತು ವಸತಿ ಸಚಿವಾಲಯ (ಎಂಯುಡಿಎಚ್‌) ಜೊತೆ ಸಂಬಂಧಗಳ ಸುಧಾರಣೆ ಮತ್ತು ದೇಶದಲ್ಲಿ ಸ್ಥಗಿತಗೊಂಡ ಯೋಜನೆಗಳ ಪುನರಾರಂಭದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದು, ನಗರಾಭಿವೃದ್ಧಿ ಮತ್ತು ವಸತಿ ಸಚಿವ ಹಮ್ದುಲ್ಲಾ ನೊಮಾನಿ ಅವರನ್ನು ಭೇಟಿಯಾಗಿ ಈ ಕುರಿತು ಚರ್ಚಿಸಿದ್ದಾರೆ ಎಂದು ಟೋಲೋ ನ್ಯೂಸ್ ಸುದ್ದಿಸಂಸ್ಥೆ ಹೇಳಿದೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ಭಾರತ ಅನುಷ್ಠಾನಗೊಳಿಸುತ್ತಿದ್ದ ಯೋಜನೆಗಳು ರಾಜಕೀಯ ಬದಲಾವಣೆ ಅಥವಾ ಇತರ ಸಮಸ್ಯೆಗಳಿಂದ ವಿಳಂಬವಾಗಿದ್ದವು. ಈಗ ಈ ಯೋಜನೆಗಳನ್ನು ಪುನರಾರಂಭಿಸಲು ಭಾರತ ಆಸಕ್ತಿ ಹೊಂದಿದೆ ಎಂದು ಎಂಯುಡಿಎಚ್‌ನ ವಕ್ತಾರ ಮೊಹಮ್ಮದ್ ಕಮಲ್  ಆಫ್ಘನ್ ಹೇಳಿದ್ದಾರೆ ಎಂದು ಟೋಲೋ ನ್ಯೂಸ್ ಉಲ್ಲೇಖಿಸಿದೆ.

ಭಾರತವು ಆಫ್ಗನ್‌ ಜನರಿಗೆ ಮಾನವೀಯ ನೆರವನ್ನು ವಿಸ್ತರಿಸಿದ್ದು, ಈಗಾಗಲೇ 20,000 ಟನ್ ಗೋಧಿ, 13 ಟನ್ ಔಷಧಿಗಳು, 5 ಲಕ್ಷ ಕೋವಿಡ್‌ ಲಸಿಕೆ ಮತ್ತು ಚಳಿಗಾಲದ ಉಡುಪುಗಳನ್ನು ಕಾಬೂಲ್‌ನಲ್ಲಿರುವ ಭಾರತ ಗಾಂಧಿ ಮಕ್ಕಳ ಆಸ್ಪತ್ರೆ, ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ಆಹಾರ ಕಾರ್ಯಕ್ರಮ ಸೇರಿದಂತೆ ವಿಶ್ವಸಂಸ್ಥೆಯ ಏಜೆನ್ಸಿಗಳಿಗೆ ಹಸ್ತಾಂತರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು