ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನ ಗಂಭೀರ ಸಮಸ್ಯೆಗಳಿಗೆ ಔಷಧ ಕಂಡುಹಿಡಿದ ಭಾರತ ಮೂಲದ ವಿಜ್ಞಾನಿ

Last Updated 21 ನವೆಂಬರ್ 2020, 6:45 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ವಿಜ್ಞಾನಿ ಡಾ.ತಿರುಮಲದೇವಿ ಕನ್ನೆಗಂಟಿ ಅವರು ಕೋವಿಡ್‌ ರೋಗಿಗಳಲ್ಲಿ ಕಾಣಿಸಿಕೊಳ್ಳಬಹುದಾದ ಉರಿಯೂತ, ಶ್ವಾಸಕೋಶದ ಹಾನಿ ಹಾಗೂ ಬಹು ಅಂಗಾಂಗ ವೈಫಲ್ಯದಂತಹ ಗಂಭೀರ ಸಮಸ್ಯೆಗಳಿಗೆ ಔಷಧ ಕಂಡುಹಿಡಿದಿದ್ದಾರೆ.

ಡಾ.ತಿರುಮಲದೇವಿ ಕನ್ನೆಗಂಟಿ ಪ್ರಯೋಗಾಲಯದಲ್ಲಿ ಅವರ ತಂಡವು ಹಲವು ಪ್ರಯೋಗಗಳನ್ನು ನಡೆಸಿ ಈ ಕಾಯಿಲೆಗಳಿಗೆ ಸೂಕ್ತ ಔಷಧ ಕಂಡುಹಿಡಿದಿದ್ದಾರೆ.‘ಸೆಲ್‌’ ಪತ್ರಿಕೆಯ ಆನ್‌ಲೈನ್‌ ಆವೃತ್ತಿಯಲ್ಲಿ ತಿರುಮಲದೇವಿ ಅವರ ಸಂಶೋಧನಾ ವರದಿಯು ಪ್ರಕಟವಾಗಿದೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ತೆಲಂಗಾಣದಲ್ಲಿ ಹುಟ್ಟಿ ಬೆಳೆದ ತಿರುಮಲದೇವಿ ಅವರು ವಾರಂಗಲ್‌ನ ಕಾಕತೀಯ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಸಸ್ಯಶಾಸ್ತ್ರ ವಿಷಯಗಳಲ್ಲಿ ಪದವಿ ಪಡೆದಿದ್ದರು. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಹಾಗೂ ಪಿಎಚ್‌ಡಿ ಪೂರ್ಣಗೊಳಿಸಿದ್ದರು. ನಂತರ 2007ರಲ್ಲಿ ಟೆನ್ನೆಸಿಯಲ್ಲಿರುವ ಸೇಂಟ್‌ ಜೂಡ್‌ ಚಿಲ್ಡ್ರನ್ಸ್‌ ರೀಸರ್ಚ್‌ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದರು.

‘ಕೋವಿಡ್‌ ರೋಗಿಗಳಲ್ಲಿ ಕಾಣಿಸಿಕೊಳ್ಳುವಉರಿಯೂತ ಹಾಗೂ ಅದಕ್ಕೆ ಕಾರಣವಾಗಿರುವ ಜೀವಕೋಶಗಳ ಕಾರ್ಯವಿಧಾನವನ್ನು ಅರ್ಥಮಾಡಿಕೊಂಡು ಪರಿಣಾಮಕಾರಿ ಚಿಕಿತ್ಸಾ ತಂತ್ರಗಳನ್ನು ಕಂಡುಹಿಡಿಯಲಾಗಿದೆ. ಈ ಸಂಶೋಧನಾ ವರದಿಯುಕೋವಿಡ್‌ ರೋಗಿಗಳಲ್ಲಿ ಕಾಣಿಸಿಕೊಳ್ಳಬಹುದಾದ ಇತರ ಗಂಭೀರ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲಲಿದೆ’ ಎಂದು ತಿರುಮಲಾದೇವಿ ಹೇಳಿದ್ದಾರೆ.

ಸೇಂಟ್‌ ಜೂಡ್‌ ಆಸ್ಪತ್ರೆಯ ಶ್ರದ್ಧಾ ತುಲಾಧರ್‌, ಪರಿಮಳ ಸಮೀರ್‌, ಮಿನ್‌ ಝೆಂಗ್‌, ಬಾಲಮುರುಗನ್‌ ಸುಂದರಂ, ಬಾಲಾಜಿ ಬಾನೋಥ್‌, ಆರ್‌.ಕೆ.ಸುಬ್ಬರಾವ್‌ ಮಾಲಿರೆಡ್ಡಿ, ಪ್ಯಾಟ್ರಿಕ್‌ ಶ್ರೇನರ್‌, ಜಿಯೊಫ್ರಿ ನೀಲ್‌, ಪೀಟರ್‌ ವೋಗಲ್‌, ರಿಚರ್ಡ್‌ ವೆಬ್ಬಿ ಹಾಗೂ ಟೆನ್ನೆಸಿ ವಿಶ್ವವಿದ್ಯಾಲಯದ ಆರೋಗ್ಯ ವಿಜ್ಞಾನ ಕೇಂದ್ರದ ಇವಾನ್‌ ಪೀಟರ್‌ ವಿಲಿಯಮ್ಸ್‌, ಲಿಲಿಯನ್‌ ಜಾಲ್ಡುವೊಂಡೊ ಮತ್ತು ಕಾಲಿನ್‌ ಬೆಥ್‌ ಜಾನ್ಸನ್‌ ಅವರೂ ಈ ಸಂಶೋಧನಾ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT