ಶನಿವಾರ, ಸೆಪ್ಟೆಂಬರ್ 18, 2021
30 °C

ಹವಾಮಾನ ಮುನ್ಸೂಚನೆ ಸುಧಾರಣೆ: ಅಮೆರಿಕ– ಭಾರತ ಒಪ್ಪಂದ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಮುಂಗಾರು ಮತ್ತು ಹವಾಮಾನ ಮುನ್ಸೂಚನೆಯ ಸುಧಾರಣೆಯ ಹಿನ್ನೆಲೆಯಲ್ಲಿ ಭಾರತ ಮತ್ತು  ಅಮೆರಿಕದ ಎರಡು ಸಂಸ್ಥೆಗಳು ಮುಂಗಾರು ದತ್ತಾಂಶವನ್ನು ವಿಶ್ಲೇಷಿಸುವ ಒಪ್ಪಂದವೊಂದಕ್ಕೆ ಸೋಮವಾರ ಸಹಿ ಹಾಕಿವೆ.

ಭಾರತದ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯ (ಎನ್‌ಐಒಟಿ) ನಿರ್ದೇಶಕ ಜಿ.ಎ. ರಾಮದಾಸ್‌ ಮತ್ತು ಅಮೆರಿಕದ ನ್ಯಾಷನಲ್‌ ಓಷನಿಕ್ ಅಂಡ್ ಅಟ್ಮಾಸ್ಪೆರಿಕ್‌ ಅಡ್ಮಿನಿಸ್ಟ್ರೇಷನ್‌ನ (ಎನ್‌ಒಎಎ) ಹಂಗಾಮಿ ಮುಖ್ಯ ವಿಜ್ಞಾನಿ ಕ್ರೇಗ್‌ ಮ್ಯಾಕ್‌ಲಿಯನ್‌ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಈ ಒಪ್ಪಂದದ ಪರಿಣಾಮವಾಗಿ ಈ ಎರಡು ಸಂಸ್ಥೆಗಳು ಆಫ್ರಿಕ -ಏಷ್ಯಾ– ಆಸ್ಟ್ರೇಲಿಯಾದ ಮುಂಗಾರು ವಿಶ್ಲೇಷಣೆ ಮತ್ತು ಮುನ್ಸೂಚನೆ (ಆರ್‌ಎಎಂಎ) ಮತ್ತು ಭಾರತದಲ್ಲಿನ ಹವಾಮಾನ ಮುನ್ಸೂಚನೆಯನ್ನು ಸುಧಾರಿಸಲು ಉಭಯ ದೇಶಗಳ ನಡುವೆ ತಾಂತ್ರಿಕ ಸಹಕಾರವನ್ನು ಹೆಚ್ಚಿಸಲಿವೆ ಎಂದು ಹೇಳಲಾಗಿದೆ.

ಕಳೆದ ಅಕ್ಟೋಬರ್‌ನಲ್ಲಿ ಭಾರತದ ಭೂ ವಿಜ್ಞಾನ ಸಚಿವಾಲಯ ಮತ್ತು ಎನ್‌ಒಎಎ ನಡುವೆ ಭೂ ವಿಜ್ಞಾನ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರ ಕುರಿತು ಆಗಿರುವ ಒಡಂಬಡಿಕೆಯ ಮುಂದುವರಿದ ಭಾಗವಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಒಡಂಬಡಿಕೆಗೆ ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರಣ್‌ಜಿತ್‌ ಸಿಂಗ್‌ ಸಂಧು ಮತ್ತು ಅಮೆರಿಕದ ವಾಣಿಜ್ಯ ಇಲಾಖೆಯ ಸಹಾಯಕ ಕಾರ್ಯದರ್ಶಿ ಮತ್ತು ಹಂಗಾಮಿ ಆಡಳಿತಾಧಿಕಾರಿ ಡಾ. ನೇಲ್‌ ಎ ಜಾಕೋಬ್ಸ್‌ ಸಹಿ ಹಾಕಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು