ರಂಗೋಲಿ: ಸಿಂಗಪುರ ಬುಕ್ ಆಫ್ ರೆರ್ಕಾಡ್ಸ್‌ಗೆ ಭಾರತೀಯ ತಾಯಿ– ಮಗಳ ಸೇರ್ಪಡೆ

ಸಿಂಗಪುರ: ತಮಿಳಿನ ಪ್ರಸಿದ್ಧ ಕವಿಗಳಾದ ತಿರುವಳ್ಳುವರ್, ಅವ್ವಯ್ಯಾರ್, ಭಾರತೀಯಾರ್ ಹಾಗೂ ಭಾರತೀದಾಸನ್ ಅವರನ್ನು 26 ಸಾವಿರ ಐಸ್‌ಕ್ರೀಮ್ ಕಡ್ಡಿಗಳಿಂದ 6 ಅಡಿ ಉದ್ದ, 6 ಅಡಿ ಅಗಲದಲ್ಲಿ ಭಾರತೀಯ ತಾಯಿ–ಮಗಳ ಜೋಡಿ ಬಿಡಿಸಿದ ರಂಗೋಲಿಯು ಈಗ ಸಿಂಗಪುರ ಬುಕ್ ಆಫ್ ರೆರ್ಕಾಡ್ಸ್‌ಗೆ ಸೇರ್ಪಡೆಗೊಂಡಿದೆ.
ತಮಿಳು ಸಾಂಸ್ಕೃತಿಕ ಸಂಘ ‘ಕಲಾಮಂಜರಿ’ ಹಾಗೂ ಲಿಟಲ್ ಇಂಡಿಯಾ ಶಾಪ್‌ಕೀಪರ್ಸ್ ಆ್ಯಂಡ್ ಹೆರಿಟೇಜ್ ಅಸೋಸಿಯೇಷನ್ ಅವರು ಸಂಕ್ರಾಂತಿ ಸಂಬಂಧ ಇಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಧಾ ರವಿ ಅವರು ರಂಗೋಲಿ ಬಿಡಿಸಿದರು.
ಸುಧಾ ರವಿ ಅವರು ತಮ್ಮ ಮಗಳು ರಕ್ಷಿತಾ ಅವರೊಂದಿಗೆ 2016ರಲ್ಲಿ 3 ಸಾವಿರ ಚದರ ಅಡಿ ಅಳತೆಯಲ್ಲಿ ಬಿಡಿಸಿದ ರಂಗೋಲಿಯೂ ದಾಖಲೆ ಪುಸ್ತಕದ ಪಟ್ಟಿಯಲ್ಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.