ಅಕ್ರಮವಾಗಿ ₹1.4 ಕೋಟಿ ಹಣ ಹೊಂದಿದ್ದ ಆರೋಪ, ನೇಪಾಳದಲ್ಲಿ ಭಾರತೀಯನ ಬಂಧನ

ಕಠ್ಮಂಡು: ಅಕ್ರಮವಾಗಿ ₹1.4 ಕೋಟಿ ನೇಪಾಳದ ಕರೆನ್ಸಿಯನ್ನು ಅಕ್ರಮವಾಗಿ ಹೊಂದಿದ್ದ ಆರೋಪದಡಿ ಭಾರತದ ನಾಗರಿಕ ಸೇರಿ ಇಬ್ಬರನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ.
ಭಾರತದ ಗೋರಖ್ ಪುರದ ನಿವಾಸಿ 30 ವರ್ಷದ ಅಮಿತ್ ಕುಮಾರ್ ಗುಪ್ತಾ ಮತ್ತು ಕಪಿಲವಸ್ತು ಜಿಲ್ಲೆಯ 22 ವರ್ಷದ ಸಂಗಮ್ ತರು ಬಂಧಿತ ಆರೋಪಿಗಳಾಗಿದ್ದು, ಕಠ್ಮಂಡು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಇವರನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸರು ಎಂದಿನಂತೆ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಈ ಇಬ್ಬರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ₹1.47 ಕೋಟಿ ನೇಪಾಳ ಕರೆನ್ಸಿ ಪತ್ತೆಯಾಗಿದೆ. ಹಣವನ್ನು ಮೂರು ಚೀಲಗಳಲ್ಲಿ ತುಂಬಿ ಕಾರಿನಲಲಿ ಅಡಗಿಸಿಡಲಾಗಿತ್ತು. ಪ್ರಕರಣ ಕುರಿತಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ನೇಪಾಳ ಪೊಲಿಸರು ಪಿಟಿಐಗೆ ತಿಳಿಸಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.