ಲಂಡನ್ (ಪಿಟಿಐ): ಇಂಗ್ಲೆಂಡ್‌ನ ವೆಸ್ಟ್ ಮಿಡ್‌ಲೆಂಡ್ಸ್‌ನಲ್ಲಿ, ಮಾದಕ ವಸ್ತು ಖರೀದಿಗೆ ಹಣ ನೀಡುವಂತೆ ಪೋಷಕರಿಗೆ ಕಿರುಕುಳ ನೀಡುತ್ತಿದ್ದ ಭಾರತ ಮೂಲದ ವ್ಯಕ್ತಿಯೊಬ್ಬನಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ದೇವನ್ ಪಟೇಲ್ (49) ಎಂಬಾತ ಶಿಕ್ಷೆಗೊಳಗಾದ ವ್ಯಕ್ತಿ. ಪೋಷಕರನ್ನು ಭೇಟಿ ಮಾಡಬಾರದೆಂದು ಈ ಹಿಂದೆ ಕೋರ್ಟ್ ದೇವನ್‌ಗೆ ಆದೇಶಿಸಿದ್ದರೂ, ಈತ ಹಣ ಪಡೆಯಲು ತನ್ನ ಪೋಷಕರನ್ನು ಭೇಟಿಯಾಗಿ ಭಾವನಾತ್ಮಕವಾಗಿ ಕಿರುಕುಳ ನೀಡುತ್ತಿದ್ದ.

‘ವಾಲ್ವರ್‌ಹ್ಯಾಂಪ್ಟನ್ ಕ್ರೌನ್ ನ್ಯಾಯಾಲಯದ ನ್ಯಾಯಾಧೀಶ ಜಾನ್ ಬಟ್ಟರ್‌ಫೀಲ್ಡ್ ಅವರು ದೇವನ್‌ಗೆ ಈ ಶಿಕ್ಷೆ ನೀಡಿದ್ದಾರೆ. ದೇವನ್ ಹಣಕ್ಕಾಗಿ ತನ್ನ ಪೋಷಕರನ್ನು ಪೀಡಿಸಿ, ಅವರ ಜೀವನವನ್ನು ನರಕವನ್ನಾಗಿ ಮಾಡಿದ್ದ. ಅಲ್ಲದೇ ನ್ಯಾಯಾಲಯದ ಆದೇಶವನ್ನೂ ಉಲ್ಲಂಘಿಸಿರುವುದಾಗಿ ಜಾನ್ ಹೇಳಿದ್ದಾರೆ’ ಎಂದು ಬರ್ಮಿಂಗ್‌ಹ್ಯಾಮ್ ಲೈವ್ ಸುದ್ದಿಸಂಸ್ಥೆ ತಿಳಿಸಿದೆ.

ಹಣಕ್ಕಾಗಿ ಕೆಲವೊಂದು ಬಾರಿ ದೇವನ್ ತನ್ನ ಪೋಷಕರಿಗೆ ದಿನಕ್ಕೆ 10 ಬಾರಿ ಕರೆ ಮಾಡುತ್ತಿದ್ದ. ಒಂದು ವೇಳೆ ಪೋಷಕರು ಕರೆಗೆ ಉತ್ತರಿಸದೇ ಹೋದರೆ ಮನೆಗೂ ಹೋಗಿ ಅವರಿಗೆ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.