ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ನ ಗಣಿತ ಒಲಿಂಪಿಯಾಡ್ ತಂಡಕ್ಕೆ ಭಾರತ ಮೂಲದ ವಿದ್ಯಾರ್ಥಿನಿ ಆಯ್ಕೆ

Last Updated 7 ಮಾರ್ಚ್ 2021, 6:14 IST
ಅಕ್ಷರ ಗಾತ್ರ

ಲಂಡನ್: ಬ್ರಿಟನ್‌ನ ಮ್ಯಾಥಮ್ಯಾಟಿಕಲ್‌ ಒಲಿಂಪಿಯಾಡ್‌ ತಂಡಕ್ಕೆ ಭಾರತ ಮೂಲದ 13 ವರ್ಷದ ವಿದ್ಯಾರ್ಥಿನಿ ಆಯ್ಕೆಯಾಗಿದ್ದು, ಬ್ರಿಟನ್‌ ತಂಡದಲ್ಲಿರುವ ಅತಿ ಕಿರಿಯ ಅಭ್ಯರ್ಥಿಯಾಗಿದ್ದಾಳೆ.

ಈ ತಂಡವು ಮುಂದಿನ ತಿಂಗಳು ಜಾರ್ಜಿಯಾದಲ್ಲಿ ನಡೆಯಲಿರುವ ‘ಯುರೋಪಿಯನ್‌ ಗರ್ಲ್ಸ್‌ ಮ್ಯಾಥಮ್ಯಾಟಿಕಲ್‌ ಒಲಿಂಪಿಯಾಡ್‌’ನಲ್ಲಿ(ಇಜಿಎಂಒ) ಸ್ಪ‍ರ್ಧಿಸಲಿದೆ. ದಕ್ಷಿಣ ಲಂಡನ್‌ನಲ್ಲಿರುವ ಆ್ಯಲೆನ್ಸ್‌ ಸ್ಕೂಲ್‌ನ ವಿದ್ಯಾರ್ಥಿನಿ ಆನ್ಯಾ ಗೋಯಲ್‌ ಬ್ರಿಟನ್‌ನ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಮಾಜಿ ಮ್ಯಾಥ್‌ ಒಲಿಂಪಿಯನ್‌ ಆಗಿರುವ ಆನ್ಯಾ ತಂದೆ ಅಮಿತ್‌ ಗೋಯಲ್ ಅವರೇ, ಆನ್ಯಾಗೆ ಗಣಿತ ತರಬೇತುದಾರರಾಗಿದ್ದಾರೆ. ಇಜಿಎಂಒನಲ್ಲಿ ಸ್ಪರ್ಧಿಸುವ ಕನಸನ್ನು ಹೊಂದಿದ್ದ ಆನ್ಯಾ, ಯುಕೆ ಮ್ಯಾಥಮ್ಯಾಟಿಕ್ಸ್‌ ಟ್ರಸ್ಟ್‌ (ಯುಕೆಎಂಟಿ) ಆಯೋಜಿಸಿದ್ದ ಸರಣಿ ಪರೀಕ್ಷೆಗಳಲ್ಲಿ ಭಾಗಿಯಾಗಿದ್ದರು.

‘ಒಲಿಂಪಿಯಾಡ್‌ನ ಗಣಿತ ಸ್ವಲ್ಪ ಕಠಿಣ. ಆದರೆ ಇದನ್ನು ನವೀನ ವಿಧಾನದಿಂದ ಬಗೆಹರಿಸಬಹುದು. ಕೆಲವನ್ನು ಬಗೆಹರಿಸಲು ಒಂದೆರೆರಡು ದಿನಗಳೇ ಬೇಕಾಗಬಹುದು. ಆದರೆ ನಾವು ಯಾವತ್ತೂ ಸುಲಭವಾಗಿ ಯಾವುದನ್ನು ಬಿಟ್ಟು ಕೊಡಬಾರದು. ಹೊಸ, ವಿನೂತ ಉಪಾಯಗಳೊಂದಿಗೆ ಪ್ರಯತ್ನ ಮುಂದುವರಿಸಬೇಕು’ ಎಂದು ಆನ್ಯಾ ಅಭ್ರಿಪ್ರಾಯಪಟ್ಟರು.

ಜನವರಿಯಲ್ಲಿ ನಡೆದ ಬ್ರಿಟನ್‌ ಮ್ಯಾಥಮ್ಯಾಟಿಕಲ್‌ ಒಲಿಂಪಿಯಾಡ್‌ನ ದ್ವಿತೀಯ ಸುತ್ತಿಗೆ 100 ಮಂದಿ ಆಯ್ಕೆಯಾಗಿದ್ದರು. ಇದರಲ್ಲಿ ಆನ್ಯಾ ಸೇರಿದಂತೆ ನಾಲ್ಕು ಹುಡುಗಿಯರು ಮೇಲುಗೈ ಸಾಧಿಸಿದ್ದರು. ಈವರೆಗೆ ಬ್ರಿಟನ್‌ನ ಮ್ಯಾಥಮ್ಯಾಟಿಕಲ್‌ ತಂಡದಲ್ಲಿ 15 ವರ್ಷದ ವಿದ್ಯಾರ್ಥಿಗಳಿದ್ದರು. ಇದೀಗ 13 ವರ್ಷದ ಆನ್ಯಾ, ತಂಡದಲ್ಲಿ ಅತಿ ಕಿರಿಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT