ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌: ಅಪಘಾತದಲ್ಲಿ ಕೇರಳದ ವಿದ್ಯಾರ್ಥಿನಿ ಸಾವು

Last Updated 28 ಫೆಬ್ರುವರಿ 2023, 5:49 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ಉತ್ತರ ಲಂಡನ್‌ನ ಲೀಡ್ಸ್‌ ನಗರದಲ್ಲಿ ಕಾರೊಂದು ವೇಗವಾಗಿ ಬಸ್‌ ನಿಲ್ದಾಣದೊಳಗೆ ನುಗ್ಗಿದ ಪರಿಣಾಮ ತೀವ್ರ ಗಾಯಗೊಂಡಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವಿದ್ಯಾರ್ಥಿನಿಯನ್ನು ಅಥಿರಾ ಅನಿಲ್‌ಕುಮಾರ್‌ ಲಾಲಿ ಕುಮಾರಿ (28) ಎಂದು ಗುರುತಿಸಲಾಗಿದೆ.

ಅಥಿರಾ ಕೇರಳದ ತಿರುವನಂತಪುರ ಮೂಲದವರು. ಕಳೆದ ತಿಂಗಳು ಇಲ್ಲಿನ ಬೆಕೆಟ್‌ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಯಾಗಿದ್ದರು ಎಂದು ಸ್ಥಳೀಯ ಮಲಯಾಳಿ ಸಂಘ ತಿಳಿಸಿದೆ.

‘ಫೆ.22ರಂದು ಘಟನೆ ನಡೆದಿದ್ದು, ಈ ವೇಳೆ ಗಾಯಗೊಂಡ ಇನ್ನೊಬ್ಬ ಪಾದಚಾರಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ಕಾರಿನ ಚಾಲಕಿ 25 ವರ್ಷದ ಮಹಿಳೆಯನ್ನು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT