ಸೋಮವಾರ, ನವೆಂಬರ್ 30, 2020
20 °C

ವಂಚನೆ: ಭಾರತೀಯ ಮೂಲದ ಗೌರವ್‌ ಗುಪ್ತಾ ದೋಷಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ರೋಬೊ ಕಾಲ್‌ಗಳ ಮೂಲಕ ಅಮೆರಿಕದ ಗ್ರಾಹಕರಿಗೆ ವಂಚಿಸುತ್ತಿದ್ದ ಪ್ರಕರಣದಲ್ಲಿ ಭಾರತೀಯ ಮೂಲದ ವಾಯ್ಸ್‌ ಓವರ್‌ ಇಂಟರ್‌ನೆಟ್‌ ಪ್ರೊಟೊಕಾಲ್‌ ಪ್ರೊವೈಡರ್‌ ಕಂಪನಿ ಇ–ಸಂಪರ್ಕ್‌ ಹಾಗೂ ಅದರ ನಿರ್ದೇಶಕ ಗೌರವ್‌ ಗುಪ್ತಾ ಅವರು ದೋಷಿ ಎಂದು ಅಮೆರಿಕದ ಫೆಡರಲ್‌ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. 

ಗುಪ್ತಾ ಮತ್ತು ಇ–ಸಂಪರ್ಕ್‌ ಕಂಪನಿಯು ಮೇ 2015ರಿಂದ ಜೂನ್‌ 2020ರ ಅವಧಿಯಲ್ಲಿ ಫ್ಲಾರಿಡಾದಲ್ಲಿ ಸುಮಾರು 60 ಸರ್ವರ್‌ಗಳನ್ನು ನಿರ್ವಹಿಸಿತ್ತು. ಇವುಗಳ ಮೂಲಕ ಭಾರತದಲ್ಲಿರುವ ಅಪರಾಧಿಗಳು ಅಮೆರಿಕದ ಗ್ರಾಹಕರ ಜೊತೆ ಸಂಪರ್ಕ ಸಾಧಿಸಲು ನೆರವು ನೀಡುತ್ತಿತ್ತು. ಇದರಿಂದ ಅಮೆರಿಕನ್ನರಿಗೆ ಸುಮಾರು ₹148.52 ಕೋಟಿ (20 ಮಿಲಿಯನ್‌ ಡಾಲರ್‌) ನಷ್ಟ ಉಂಟು ಮಾಡಿದೆ ಎಂದು ನ್ಯಾಯಾಲಯ ಹೇಳಿದೆ.

ಈ ಸರ್ವರ್‌ಗಳಲ್ಲಿ ರೋಬೊಕಾಲ್ ವಾಯ್ಸ್‌ಮೇಲ್‌ ರೆಕಾರ್ಡಿಂಗ್‌ ಸೇರಿದಂತೆ 1.30 ಲಕ್ಷಕ್ಕೂ ಅಧಿಕ ಕರೆಗಳು ದಾಖಲಾಗಿವೆ ಎಂದೂ ನ್ಯಾಯಾಲಯ ತಿಳಿಸಿದೆ.

‘ಪ್ರತಿವಾದಿಗಳು ಸ್ಕ್ಯಾಮ್‌ ಕರೆಗಳ ಮೂಲಕ ಅಮೆರಿಕದ ಗ್ರಾಹಕರ ಮೇಲೆ ದಾಳಿ ನಡೆಸಿವೆ. ವಯಸ್ಸಾದವರು ಮತ್ತು ದುರ್ಬಲರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಲ್ಲದೆ ಅವರನ್ನು ಆರ್ಥಿಕ ವಿನಾಶಕ್ಕೆ ದೂಡಿವೆ’ ಎಂದು ಅಮೆರಿಕದ ಅಟಾರ್ನಿ ಬ್ಯೂಂಗ್‌ಜೆ ಪಾಕ್‌ ಹೇಳಿದ್ದಾರೆ.   

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು