ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ವನ್ಯಜೀವಿ ತಜ್ಞೆಗೆ ವಿಶ್ವಸಂಸ್ಥೆಯ ಅತ್ಯುನ್ನತ ಪ್ರಶಸ್ತಿ

Last Updated 22 ನವೆಂಬರ್ 2022, 15:51 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಭಾರತೀಯ ವನ್ಯಜೀವಿ ತಜ್ಞೆ, ಅಸ್ಸಾಂನ ಡಾ. ಪೂರ್ಣಿಮಾ ದೇವಿ ಬರ್ಮನ್‌ ಅವರಿಗೆ ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವ ಪ್ರಶಸ್ತಿ ಎನಿಸಿರುವ ‘ಈ ವರ್ಷದ ಚಾಂಪಿಯನ್ಸ್‌ ಆಫ್‌ ಅರ್ಥ್‌’ ಪ್ರಶಸ್ತಿ ಲಭಿಸಿದೆ.

ಪರಿಸರ ಜೀವವೈವಿಧ್ಯತೆ ವ್ಯವಸ್ಥೆಯ ಅವನತಿಯನ್ನು ತಡೆಗಟ್ಟಲು ಮತ್ತು ಅವನತಿಯನ್ನು ಹಿಮ್ಮುಖಗೊಳಿಸಲು ಅವರು ಕೈಗೊಂಡ ಪರಿವರ್ತನಾ ಕ್ರಮಗಳಿಗೆ ಈ ಗೌರವ ಸಂದಿದೆ.ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (ಯುಎನ್‌ಇಪಿ)ವಾಣಿಜ್ಯೋದ್ಯಮ ನೋಟದ ವಿಭಾಗದಲ್ಲಿ 2022ರ ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ ನೀಡಿ ಪೂರ್ಣಿಮಾ ದೇವಿ ಬರ್ಮನ್‌ ಅವರನ್ನು ಗೌರವಿಸಲಾಗಿದೆ.

ಪೂರ್ಣಿಮಾದೇವಿ ಬರ್ಮನ್ ಅವರು ಅಳಿವಿನಂಚಿನಿಂದ ಗ್ರೇಟರ್ ಅಡ್ಜುಟೆಂಟ್ ಸ್ಟಾರ್ಕ್‌ (ಕೊಕ್ಕರೆ ಜಾತಿಗೆ ಸೇರಿದ ಬಣ್ಣದ ಕೊಕ್ಕರೆ) ರಕ್ಷಿಸಲು ಮೀಸಲಾಗಿರುವ ಮಹಿಳಾ ಕಾರ್ಯಕರ್ತರಿಂದ ಕೂಡಿದ ತಳಮಟ್ಟದ ಸಂರಕ್ಷಣಾ ಆಂದೋಲನ ‘ಹರ್ಗೀಲಾ ಆರ್ಮಿ’ಯನ್ನು ಮುನ್ನಡೆಸುತ್ತಿದ್ದಾರೆ. ಬರ್ಮನ್ ಅವರು ಅರಣ್ಯಕದ ಅವಿಫೌನಾ ಸಂಶೋಧನಾ ಮತ್ತು ಸಂರಕ್ಷಣಾ ವಿಭಾಗದ ಹಿರಿಯ ಯೋಜನಾ ವ್ಯವಸ್ಥಾಪಕಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT