ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೊನೇಷ್ಯಾ ಭೂಕಂಪ: ಸಾವಿನ ಸಂಖ್ಯೆ 268ಕ್ಕೆ ಏರಿಕೆ

Last Updated 22 ನವೆಂಬರ್ 2022, 13:55 IST
ಅಕ್ಷರ ಗಾತ್ರ

ಸಿಯಾಂಜೂರ್‌ (ಇಂಡೊನೇಷ್ಯಾ):ಇಂಡೊನೇಷ್ಯಾದ ಜಾವಾ ದ್ವೀಪದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸತ್ತವರ ಸಂಖ್ಯೆಮಂಗಳವಾರ 268ಕ್ಕೆ ಏರಿದೆ. ಕುಸಿದ ಕಟ್ಟಡಗಳ ಅವಶೇಷಗಳಡಿ ಎರಡನೇ ದಿನ ಮತ್ತಷ್ಟು ಶವಗಳು ದೊರೆತಿವೆ. ಇನ್ನೂ 151 ಜನರು ಕಾಣೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮತ್ತು ಶೋಧ ಕಾರ್ಯ ಕ್ಷಿಪ್ರಗತಿಯಲ್ಲಿ ಮುಂದುವರಿದಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಏಜೆನ್ಸಿ ತಿಳಿಸಿದೆ.

ರಕ್ಷಣಾ ತಂಡಗಳು ಸೋಮವಾರ ಒಂದೇ ದಿನದಲ್ಲಿ 162 ಶವಗಳನ್ನು ಅವಶೇಷಗಳ ಅಡಿಯಿಂದ ಹೊರ ತೆಗೆದಿದ್ದವು. ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದವು. ಹೆಚ್ಚಿನ ಗಾಯಾಳುಗಳಿಗೆ ಜಕಾರ್ತದ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಯಿತು.

ಭಗ್ನಾವಶೇಷಗಳಡಿ ಸಿಲುಕಿದವರಲ್ಲಿ ಕೆಲವರು ಜೀವಂತವಿರಬಹುದೆಂಬ ನಿರೀಕ್ಷೆಯಲ್ಲಿ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ಮುಂದುವರಿಸಿವೆ. ಹೆಚ್ಚಾಗಿ ಗ್ರಾಮೀಣ, ಪರ್ವತ ಪ್ರದೇಶದ ಕೆಲವು ಭಾಗಗಳಲ್ಲಿ ರಸ್ತೆ ಸಂಪರ್ಕ ಕಡಿದು ಹೋಗಿರುವುದು, ವಿದ್ಯುತ್ ನಿಲುಗಡೆಯಾಗಿರುವುದು ಶೋಧ ಕಾರ್ಯಾಚರಣೆಗೆ ಸವಾಲೊಡ್ಡಿತು.

ಹೆಚ್ಚು ಜನನಿಬಿಡ ಪಶ್ಚಿಮ ಜಾವಾ ದ್ವೀಪದ ಸಿಯಾಂಜೂರ್ ನಗರದ ಬಳಿಸೋಮವಾರ ಮಧ್ಯಾಹ್ನ ಸಂಭವಿಸಿದ ಪ್ರಬಲ ಭೂಕಂಪ ನೂರಾರು ಜನರ ಜೀವ ಬಲಿ ಪಡೆದಿದೆ. ಅಲ್ಲದೆ 1,083 ಜನರು ಗಾಯಗೊಂಡಿದ್ದಾರೆ ಎಂದುಏಜೆನ್ಸಿಯ ಮುಖ್ಯಸ್ಥ ಸುಹಾರಿಯಂಟೊ ತಿಳಿಸಿದರು.

ಮೃತಪಟ್ಟವರಲ್ಲಿ ಹೆಚ್ಚಿನವರು ಶಾಲಾ ಮಕ್ಕಳು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಶಾಲಾ ತರಗತಿಗಳು ನಡೆಯುತ್ತಿದ್ದಾಗಲೇಭೂಕಂಪ ಸಂಭವಿಸಿತ್ತು. ಮಕ್ಕಳು ಹೊರಗೆ ಓಡಿಬರಲಾಗದೆ, ಕುಸಿದ ಶಾಲಾ ಕಟ್ಟಡಗಳ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ ಎಂದುರಾಷ್ಟ್ರೀಯ ರಕ್ಷಣಾ ಏಜೆನ್ಸಿಬಸಾರ್ನಾಸ್ ಹೇಳಿದೆ.

ಬದುಕುಳಿದವರಿಗೆ ಧೈರ್ಯ ತುಂಬಲು ಮತ್ತು ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದಿಂದ ಅಗತ್ಯ ನೆರವು ಕಲ್ಪಿಸುವ ಸಲುವಾಗಿಅಧ್ಯಕ್ಷ ಜೋಕೊ ವಿಡೋ ಅವರು ಭೂಕಂಪ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದರು. ತಾತ್ಕಾಲಿಕ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

ಕಾರ್ಗಿಲ್‌ನಲ್ಲೂ 4.2 ತೀವ್ರತೆಯ ಭೂಕಂಪ

ಲೇಹ್‌/ಜಮ್ಮು : ಇಂಡೊನೇಷ್ಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ಬೆನ್ನಲ್ಲೇ ಹಿಮಾಲಯ ಪರ್ವತಶ್ರೇಣಿಯ ಲಡಾಖ್‌ನ ಕಾರ್ಗಿಲ್‌ ಜಿಲ್ಲೆಯಲ್ಲಿ ಮಂಗಳವಾರಬೆಳಿಗ್ಗೆ 10.05ಕ್ಕೆ ಭೂಕಂಪ ಆಗಿದೆ. ರಿಕ್ಟರ್‌ ಮಾಪಕದಲ್ಲಿ 4.2ರಷ್ಟು ತೀವ್ರತೆ ದಾಖಲಾಗಿದ್ದು ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ.

ಕಂಪನದ ಕೇಂದ್ರಬಿಂದು ಕಾರ್ಗಿಲ್‌ನಿಂದ ಉತ್ತರಕ್ಕೆ 191 ಕಿಲೋಮೀಟರ್ ದೂರದಲ್ಲಿ ಮತ್ತು 10 ಕೀ.ಮೀ ಆಳದಲ್ಲಿ ದಾಖಲಾಗಿದೆ ಎಂದುರಾಷ್ಟ್ರೀಯ ಭೂಕಂಪ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT