ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ವರದಿ ಮುಚ್ಚಿಟ್ಟ ಆರೋಪ: ಇಂಡೋನೇಷ್ಯಾದ ಮೌಲ್ವಿಗೆ ನಾಲ್ಕು ವರ್ಷ ಶಿಕ್ಷೆ

Last Updated 24 ಜೂನ್ 2021, 9:04 IST
ಅಕ್ಷರ ಗಾತ್ರ

ಜಕಾರ್ತಾ(ಇಂಡೊನೇಷ್ಯಾ): ಕೊರೊನಾ ಸೋಂಕು ಪರೀಕ್ಷೆ ಫಲಿತಾಂಶವನ್ನು ಮುಚ್ಚಿಟ್ಟ ಆರೋಪದ ಹಿನ್ನೆಲೆಯಲ್ಲಿ ಪೂರ್ವ ಜಕಾರ್ತಾದ ನ್ಯಾಯಾಲಯವೊಂದು ಇಂಡೋನೇಷ್ಯಾದ ಪ್ರಭಾವಿ ಮೌಲ್ವಿಯೊಬ್ಬರಿಗೆ ಗುರುವಾರ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಮೌಲ್ವಿ ರಜೀಕ್ ಶಿಹಾಬ್‌ ಶಿಕ್ಷೆಗೊಳಗಾದವರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 13ರಂದು ಈ ಮೌಲ್ವಿಯನ್ನು ಪೊಲೀಸರು ಬಂಧಿಸಿದ್ದರು. ದೇಶಭ್ರಷ್ಟರಾಗಿ ಸೌದಿ ಅರೇಬಿಯಾದಲ್ಲಿ ಮೂರು ವರ್ಷ ಕಳೆದಿದ್ದ ಅವರು ಕಳೆದ ನವೆಂಬರ್‌ನಲ್ಲಷ್ಟೇ ದೇಶಕ್ಕೆ ಮರಳಿದ್ದರು. ಅವರ ವಿರುದ್ಧ ಹಲವು ಕ್ರಿಮಿನಲ್‌ ಪ್ರಕರಣಗಳೂ ಇವೆ.

ಶಿಹಾಬ್‌ ಬಿಡುಗಡೆ ಒತ್ತಾಯಿಸಿ ಅವರ ಬೆಂಬಲಿಗರು ನ್ಯಾಯಾಲಯದ ಹೊರಗೆ ಪ್ರತಿಭಟನೆ ನಡೆಸಲು ಮುಂದಾರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ನ್ಯಾಯಾಲಯದ ಸುತ್ತಲಿನ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿದರು.

ಭಾರಿ ಪೊಲೀಸ್ ಮತ್ತು ಮಿಲಿಟರಿಯ ರಕ್ಷಣೆಯೊಂದಿಗೆ ಪೂರ್ವ ಜಕಾರ್ತಾದ ಜಿಲ್ಲಾ ನ್ಯಾಯಾಲಯದ ತ್ರಿಸದಸ್ಯರ ನ್ಯಾಯ ಪೀಠ ಶಿಹಾಬ್‌ ಪ್ರಕರಣದ ವಿಚಾರಣೆ ನಡೆಸಿ, ಆರೋಪಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯ ತೀರ್ಪು ಪ್ರಕಟಿಸಿತು.

‘ಮೌಲ್ವಿ ರಿಜೀಕ್‌ ಶಿಹಾಬ್‌, ಕೋವಿಡ್‌–19 ಪರೀಕ್ಷಾ ಫಲಿತಾಂಶದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಇದರಿಂದ ಸೋಂಕಿತರ ಸಂಪರ್ಕ ಪತ್ತೆ ಹಚ್ಚುವುದು ಕಷ್ಟವಾಯಿತು‘ ಎಂದು ಪೀಠ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಕೊರೊನಾ ವ್ಯಾಪಕವಾಗಿದ್ದ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಿದ ಹಾಗೂ ತಮ್ಮ ಮಗಳ ಮದುವೆಗೆ ಸಾವಿರಾರು ಮಂದಿಯನ್ನು ಆಹ್ವಾನಿಸಿದ ಆರೋಪದ ಮೇರೆಗೆ ಇದೇ ನ್ಯಾಯಾಲಯ ಮೇ 27ರಂದು ತೀರ್ಪು ನೀಡಿ, ಮೌಲ್ವಿ ಅವರಿಗೆ 8 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT