ಟೆಹರಾನ್: ದೇಶದ ಪರಮಾಣು ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡು ನಡೆದಿದ್ದ ವಿಧ್ವಂಸಕ ದಾಳಿ ಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಇರಾನ್‌ನ ಭದ್ರತಾ ಪಡೆಗಳಿಗೆ ನಿಕಟವಾಗಿರುವ ಸುದ್ದಿಸಂಸ್ಥೆ‘ನೌರ್‌ನ್ಯೂಸ್’ ವರದಿ ಮಾಡಿದೆ.

‘ನೌರ್‌ನ್ಯೂಸ್’ ಎಂಬ ವೆಬ್ ಪೋರ್ಟಲ್ ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್‌ಗೆ ಸಂಬಂಧಿಸಿದ ವಿದ್ಯಮಾನಗಳ ಕುರಿತು ವರದಿ ಮಾಡುತ್ತದೆ.

‘ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಕಟ್ಟಡಗಳಿಗೆ ಹಾನಿ ಸಂಭವಿಸುವ ಮೊದಲೇ ವಿಧ್ವಂಸಕ ದಾಳಿ ಯತ್ನವನ್ನು ವಿಫಲಗೊಳಿಸಲಾಯಿತು. ಈ ಘಟನೆ ಕುರಿತು ತನಿಖೆ ನಡೆಯುತ್ತಿದೆ’ ಎಂದು ವರದಿ ಮಾಡಿದೆ.

ಮತ್ತೊಂದು ಸುದ್ದಿಸಂಸ್ಥೆ ಐಎಸ್‌ಎನ್‌ಎ ಸಹ ಈ ಘಟನೆ ಕುರಿತು ವರದಿ ಮಾಡಿದೆ. ‘ರಾಜಧಾನಿ ಟೆಹರಾನ್‌ನಿಂದ 40 ಕಿ.ಮೀ. ದೂರದಲ್ಲಿರುವ ಕರಾಜ್ ನಗರದಲ್ಲಿರುವ ಕಟ್ಟಡವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು’ ಎಂದು ಹೇಳಿದೆ.

ಸರ್ಕಾರಿ ಒಡೆತನದ ‘ಐಆರ್‌ಎಎನ್’ ಪತ್ರಿಕೆ ಸಹ ಈ ಕುರಿತು ವರದಿ ಮಾಡಿದೆ. ಅಧಿಕಾರಿಗಳು ಮಾತ್ರ ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.