ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್‌ನಿಂದ ಅಣು ವಿದ್ಯುತ್‌ ಸ್ಥಾವರ ಕಾಮಗಾರಿ ಆರಂಭ: ವರದಿ

Last Updated 4 ಡಿಸೆಂಬರ್ 2022, 13:31 IST
ಅಕ್ಷರ ಗಾತ್ರ

ಕೈರೊ:ಇರಾನ್‌, ದೇಶದ ವಾಯವ್ಯದಲ್ಲಿ ನೂತನ ಅಣು ವಿದ್ಯುತ್‌ ಸ್ಥಾವರ ನಿರ್ಮಾಣ ಕಾಮಗಾರಿಯನ್ನು ಶನಿವಾರದಿಂದ ಆರಂಭಿಸಿದೆ ಎಂದು ಇಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

‘ಕರೂನ್’ ಹೆಸರಿನ 300 ಮೆಗಾ ವ್ಯಾಟ್‌ ಸಾಮರ್ಥ್ಯದ ಸ್ಥಾವರದ ನಿರ್ಮಾಣ ಕಾಮಗಾರಿಯು ಮುಂದಿನ ಎಂಟು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಇದಕ್ಕೆ ಅಂದಾಜು 2 ಬಿಲಿಯನ್‌ ಡಾಲರ್‌ (₹16,284 ಕೋಟಿ) ವೆಚ್ಚವಾಗಲಿದೆ.ಇದು ಇರಾನ್‌ನ ಖುಜೆಸ್ತಾನ್‌ ಪ್ರಾಂತ್ಯದಲ್ಲಿ ನಿರ್ಮಾಣವಾಗುತ್ತಿದೆ’ ಎಂದು ತಿಳಿಸಿದೆ.

ವಸ್ತ್ರಸಂಹಿತೆ ವಿಚಾರವಾಗಿ ಬಂಧಿಸಲ್ಪಟ್ಟಿದ್ದ ಯುವತಿ ಪೊಲೀಸ್‌ ವಶದಲ್ಲಿ ಇರುವಾಗಲೇ ಮೃತಪಟ್ಟ ಹಿನ್ನೆಲೆಯಲ್ಲಿ ದೇಶದಾದ್ಯಂತ ಸರ್ಕಾರ ವಿರೋಧಿ ಪ್ರತಿಭಟನೆಗಳು ತೀವ್ರವಾಗಿವೆ. ಈ ಮಧ್ಯೆ ಅಣುಸ್ಥಾವರ ನಿರ್ಮಾಣದ ಘೋಷಣೆ ಹೊರಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT