ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನ್ ಸರ್ಕಾರ ರಚನೆ ಕಸರತ್ತು: ಕಾಬೂಲ್‌ಗೆ ತೆರಳಿದ ಪಾಕ್‌ನ ಐಎಸ್‌ಐ ಮುಖ್ಯಸ್ಥ

Last Updated 4 ಸೆಪ್ಟೆಂಬರ್ 2021, 13:41 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಶನಿವಾರ ಕಾಬೂಲ್‌ಗೆ ತೆರಳಿದ್ದಾರೆ.

ಅಫ್ಗಾನಿಸ್ತಾನದಲ್ಲಿ ಅಂತರರಾಷ್ಟ್ರೀಯ ಸಮುದಾಯಗಳು ಒಪ್ಪುವಂತಹ ಸರ್ಕಾರ ರಚನೆಗೆ ತಾಲಿಬಾನ್ ಯತ್ನಿಸುತ್ತಿದ್ದು, ಈ ಮಧ್ಯೆಯೇ ಐಎಸ್‌ಐ ಮುಖ್ಯಸ್ಥನ ಬೇಟಿ ಕುತೂಹಲ ಕೆರಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ)ನ ಡೈರೆಕ್ಟರ್ ಜನರಲ್, ಲೆಫ್ಟಿನೆಂಟ್ ಹಮೀದ್ ನೇತೃತ್ವದ ಪಾಕಿಸ್ತಾನದ ಹಿರಿಯ ಅಧಿಕಾರಿಗಳ ನಿಯೋಗವು ಕಾಬೂಲ್‌ಗೆ ತೆರಳಿದ್ದು, ತಾಲಿಬಾನ್ ನಾಯಕತ್ವದ ಜೊತೆ ಮಾತುಕತೆ ನಡೆಸಲಿದೆ ಎಂದು ಪಾಕಿಸ್ತಾನ ಅಬ್ಸರ್ವರ್ ಪತ್ರಿಕೆ ವರದಿ ಮಾಡಿದೆ.

ಐಎಸ್‌ಐ ಮುಖ್ಯಸ್ಥನು ತಾಲಿಬಾನ್‌ನ ಪ್ರಮುಖ ನಾಯಕರು ಮತ್ತು ಕಮಾಂಡರ್‌ಗಳನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ‘ಪಾಕ್-ಆಫ್ಗಾನ್ ಭದ್ರತೆ, ಆರ್ಥಿಕತೆ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ತಾಲಿಬಾನ್ ನಾಯಕತ್ವದೊಂದಿಗೆ ಚರ್ಚೆ ನಡೆಸಲಾಗುತ್ತದೆ’ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ.

ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪ್ರಕಾರ, ಹಮೀದ್ ಕಾಬೂಲ್‌ನಲ್ಲಿ ಪಾಕಿಸ್ತಾನದ ರಾಯಭಾರಿಯನ್ನು ಭೇಟಿ ಮಾಡಿ ತಾಲಿಬಾನ್ ಆಳ್ವಿಕೆಗೆ ಬೆದರಿ ಪಲಾಯನ ಮಾಡುತ್ತಿರುವ ವಿದೇಶಿ ಪ್ರಜೆಗಳು ಮತ್ತು ಅವರನ್ನು ಪಾಕಿಸ್ತಾನದ ಮೂಲಕ ಕಳುಹಿಸುವ ವಿಷಯದ ಬಗ್ಗೆ ಚರ್ಚಿಸಲಿದ್ದಾರೆ.

ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ದಾಳಿ ಹಿಂದೆ ಪಾಕಿಸ್ತಾನದ ಪಾತ್ರವಿದೆ ಎಂದು ಆರೋಪ ಕೇಳಿಬರುತ್ತಿದ್ದು, ಅಲ್ಲಿ ತಾಲಿಬಾನ್ ಸರ್ಕಾರ ರಚನೆಗೂ ಮುನ್ನ ಐಎಸ್‌ಐ ಮುಖ್ಯಸ್ಥನ ಭೇಟಿ ಅಂತರರಾಷ್ಟ್ರೀಯ ಸಮುದಾಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT