ಶುಕ್ರವಾರ, ಜೂನ್ 25, 2021
29 °C
ಐಎಸ್‌ ಉಗ್ರ ಸಂಘಟನೆ ಸೇರಿದ್ದ ಜರ್ಮನಿ ಮಹಿಳೆಯ ಕೃತ್ಯ

ಐಎಸ್‌ ಉಗ್ರ ಸಂಘಟನೆಯ ಮಹಿಳೆಗೆ ಮದುವೆ ಉಡುಗೊರೆಯಾಗಿ ಸಿಕ್ಕಿದ ಎಕೆ–47 ಮಾರಾಟ

ಎಪಿ Updated:

ಅಕ್ಷರ ಗಾತ್ರ : | |

Prajavani

ಬರ್ಲಿನ್‌: ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ಸೇರಿದ ಜರ್ಮನ್‌ ಮಹಿಳೆಯೊಬ್ಬರು ತನಗೆ ಮದುವೆ ಉಡುಗೊರೆಯಾಗಿ ನೀಡಿದ್ದ ಎಕೆ 47 ರೈಫಲ್ ಅನ್ನು ಮಾರಾಟ ಮಾಡಿದ್ದಾರೆ ಎಂದು ಜರ್ಮನ್‌ ಪ್ರಾಸಿಕ್ಯೂಟರ್‌ ಗುರುವಾರ ಆರೋಪಿಸಿದ್ದಾರೆ.

‘ಈ ಮೂಲಕ ಜೆನೆಪ್‌ ಜಿ ಕಾನೂನು ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ವಿದೇಶಿ ಉಗ್ರ ಸಂಘಟನೆಯ ಚಟುವಟಿಕೆಯಲ್ಲಿ ಭಾಗಿ, ಶಸ್ತ್ರಾಸ್ತ್ರ ನಿಯಂತ್ರಣ ಕಾನೂನು ಉಲ್ಲಂಘನೆ ಮತ್ತು ಯುದ್ಧ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ’ ಎಂದು ಜರ್ಮನ್‌ ಫೆಡರಲ್‌ ಪ್ರಾಸಿಕ್ಯೂಟರ್‌ ಹೇಳಿದರು.

‘ಜರ್ಮನ್‌ ಪ್ರಜೆ ಜೆನೆಪ್‌ ಜಿ ಅಕ್ಟೋಬರ್‌ 2014 ರಂದು ಸಿರಿಯಾಗೆ ತೆರಳಿ ಅಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆಗೆ ಸೇರ್ಪಡೆಯಾದರು. ಸಂಘಟನೆಯ ಸದಸ್ಯನನ್ನೇ ವರಿಸಿದರು. ಬಳಿಕ ಸಾಮಾಜಿಕ ಜಾಲತಾಣದ ಮೂಲಕ ಜರ್ಮನಿಯಲ್ಲಿರುವ ತನ್ನ ಸ್ನೇಹಿತರನ್ನು ಇಸ್ಲಾಮಿಕ್‌ ಸ್ಟೇಟ್‌ಗೆ ಸೇರ್ಪಡೆಯಾಗಲು ಆಹ್ವಾನಿಸಿದ್ದರು’ ಎಂದು ಅವರು ಹೇಳಿದರು. 

‘ಆದರೆ 2015ರಲ್ಲಿ ಜೆನೆಪ್‌ ಜಿ ಪತಿ ಮೃತಪಟ್ಟಿದ್ದಾರೆ. ಹಾಗಾಗಿ ಹಣಕಾಸಿನ ಕೊರತೆಯಿಂದಾಗಿ ತನಗೆ ಮದುವೆ ಉಡುಗೊರೆಯಾಗಿ ದೊರೆತ ಎಕೆ–47 ಅನ್ನು ಮಾರಾಟ ಮಾಡಿದ್ದಾರೆ’  ಎಂದು ಪ್ರಾಸಿಕ್ಯೂಟರ್ ಆರೋಪಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು