ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿಯಾಗಿ ಕೊನೆಯ ಭಾಷಣ ಮಾಡಿದ ಜಸಿಂಡ ಆರ್ಡರ್ನ್

Last Updated 24 ಜನವರಿ 2023, 6:07 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ ಪ್ರಧಾನಿ ಜಸಿಂಡ ಆರ್ಡರ್ನ್ ಮಂಗಳವಾರ ಕಣ್ಣೀರಿಡುತ್ತಲೇ ತಮ್ಮ ಕೊನೆಯ ಭಾಷಣ ಮಾಡಿದರು. ಉತ್ತರಾಧಿಕಾರಿ ಕ್ರಿಸ್ ಹಿಪ್ಕಿನ್ಸ್ ಕೂಡ ಅವರ ಜತೆಗಿದ್ದರು.

ಲೇಬರ್‌ ಪಾರ್ಟಿ ನಾಯ‌ಕಿ 42 ವರ್ಷದ ಜಸಿಂಡ, ತಮ್ಮ ನಿರ್ಗಮನವನ್ನು ನಕಾರಾತ್ಮಕ ವ್ಯಾಖ್ಯಾನವೆಂದು ಪರಿಗಣಿಸಬಾರದು ಎಂದು ಹೇಳಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘ತಾವು ಪ್ರಧಾನಿ ಹುದ್ದೆಯಲ್ಲಿದ್ದಾಗ ಜನರ ಪ್ರೀತಿ, ಸಹಾನುಭೂತಿ ಮತ್ತು ದಯೆಯನ್ನು ಪಡೆದಿರುವೆ. ಅದು ಎಂದಿಗೂ ಮರೆಯಲಾಗದ ಅನುಭವವಾಗಿದೆ’ ಎಂದು ಆರ್ಡರ್ನ್ ಹೇಳಿದರು.

‘ನಾನು ಎಲ್ಲಿಯೂ ಹೋಗುತ್ತಿಲ್ಲ ಮತ್ತು ಆಲ್ಬರ್ಟ್ ಮೌಂಟ್‌ಗೆ ಸಂಸದೆಯಾಗಿ ಮುಂದುವರಿಯುವೆ. ಆದರೆ ಕೇಂದ್ರ ರಾಜಕೀಯದಿಂದ ದೂರವಿರುವೆ’ ಎಂದು ಅವರು ತಿಳಿಸಿದರು.

‘ತಾವು ಮತ್ತು ಆರ್ಡರ್ನ್ ಅವರು ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ರಾಜಕೀಯದಲ್ಲಿ ಒಟ್ಟಿಗೆ ಗುರುತಿಸಿಕೊಂಡಿದ್ದೆವು. ಇದೊಂದು ಕಹಿ ಕ್ಷಣ’ ಎಂದು ಹಿಪ್ಕಿನ್ಸ್‌ ಹೇಳಿದರು.

ಜನವರಿ 19 ರಂದು ಆಘಾತಕಾರಿ ಪ್ರಕಟಣೆಯಲ್ಲಿ, ಆರ್ಡರ್ನ್ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ಘೋಷಿಸಿದ್ದರು. ‘ಫೆ.7ರ ಒಳಗಾಗಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವೆ. ಅಕ್ಟೋಬರ್‌ 14ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ದೇಶವು ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲಿದೆ’ ಎಂದೂ ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT