ಬುಧವಾರ, ಜೂನ್ 29, 2022
24 °C

ದ್ವಿಪಕ್ಷೀಯ ಬಾಂಧವ್ಯ: ಜೈಶಂಕರ್, ಇಥಿಯೋಪಿಯಾ ಅಧ್ಯಕ್ಷ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡಿಸ್ ಅಬಾಬಾ: ‌ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಬುಧವಾರ ಇಥಿಯೋಪಿಯಾ  ಅಧ್ಯಕ್ಷ ಸಹ್ಲೆ-ವರ್ಕ್ ಝೆವ್ಡೆ ಅವರನ್ನು ಭೇಟಿಯಾಗಿ, ದ್ವಿಪಕ್ಷೀಯ ಸಹಕಾರದ ಬಗ್ಗೆ ಸಮಾಲೋಚನೆ ನಡೆಸಿದರು. 

ಈ ಬಗ್ಗೆ ಟ್ವೀಟ್ ಮಾಡಿರುವ ಜೈಶಂಕರ್, ’ದ್ವಿಪಕ್ಷೀಯ ಸಹಕಾರ ಸೇರಿದಂತೆ ಶಿಕ್ಷಣ, ಆರೋಗ್ಯ, ಬಂಡವಾಳ ಕುರಿತು ಉತ್ತಮ ಚರ್ಚೆ ನಡೆಯಿತು ‘ ಎಂದು ಹೇಳಿದ್ದಾರೆ. ಇದೇ ವೇಳೆ ಭಾರತೀಯ ಸಮುದಾಯ ಉದ್ದೇಶಿಸಿ ಅವರು ಮಾತನಾಡಿದರು.

ಇಲ್ಲಿನ ಭಾರತೀಯ ರಾಯಭಾರಿ ಕಚೇರಿ ವೆಬ್‌ಸೈಟ್ ಪ್ರಕಾರ, ಇಥಿಯೋಪಿಯಾದಲ್ಲಿ ಭಾರತೀಯ ವಲಸೆಗಾರರು 6 ಸಾವಿರದಿಂದ 7 ಸಾವಿರ ಜನರು ಇರಬಹುದು ಎಂದು ಅಂದಾಜಿಸಲಾಗಿದೆ. ಪೂರ್ವ ಆಫ್ರಿಕಾ ದೇಶದಲ್ಲಿ ಹಲವಾರು ಭಾರತೀಯ ಕಂಪನಿಗಳಿವೆ.  

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು