ಬುಧವಾರ, ಅಕ್ಟೋಬರ್ 5, 2022
26 °C

ನೆಪ್ಚೂನ್‌ನಲ್ಲೂ ಉಂಗುರ: ಚಿತ್ರ ಸೆರೆ ಹಿಡಿದ ಜೇಮ್ಸ್‌ ವೆಬ್‌ ದೂರದರ್ಶಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ನಾಸಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು ಮೊದಲ ಬಾರಿಗೆ ನೆಪ್ಚೂನ್‌ ಗ್ರಹದ ಚಿತ್ರವನ್ನು ಅತ್ಯಂತ ಸ್ಪಷ್ಟವಾಗಿ ಸೆರೆ ಹಿಡಿದಿದೆ.

ಮೂರು ದಶಕಗಳ ನಂತರ ದೂರದ ಈ ಗ್ರಹದ ಸ್ಪಷ್ಟ ನೋಟ ಜೇಮ್ಸ್ ವೆಬ್ ದೂರದರ್ಶಕದಲ್ಲಿ ಸೆರೆಯಾಗಿದೆ. ಗ್ರಹದ ಸುತ್ತಲಿನ ಉಂಗುರಗಳ ಪ್ರಕಾಶಮಾನದ ನೋಟ ಈ ಚಿತ್ರದ ವಿಶೇಷತೆಯಾಗಿದೆ.

ನಾಸಾದ ವಾಯೇಜರ್ 2 ಬಾಹ್ಯಾಕಾಶ ನೌಕೆಯು 1989ರಲ್ಲಿ ನೆಪ್ಚೂನ್ ಗ್ರಹವನ್ನು ಮೊದಲ ಬಾರಿಗೆ ಪತ್ತೆ ಹಚ್ಚಿತ್ತು. ಆಗ ನೆಪ್ಚೂನ್‌ ಗ್ರಹದ ಸುತ್ತಲಿನ ವಿಶಿಷ್ಟವಾದ ಉಂಗುರಗಳು ಕಂಡುಬಂದಿರಲಿಲ್ಲ ಎಂದು ನಾಸಾ ಹೇಳಿದೆ.

ಜೇಮ್ಸ್‌ ವೆಬ್ ಸೆರೆ ಹಿಡಿದ ಚಿತ್ರದಲ್ಲಿ ನೆಪ್ಚೂನ್‌ ಗ್ರಹವು ಪ್ರಕಾಶಮಾನವಾಗಿದ್ದು, ಕಿರಿದಾದ ಉಂಗುರಗಳ ಜೊತೆಗೆ ಮಸುಕಾದ ಧೂಳಿನ ಪಟ್ಟಿ ಗೋಚರವಾಗಿದೆ. ‘ಈ ಮಸುಕಾದ, ಧೂಳಿನ ಉಂಗುರಗಳನ್ನು ಕೊನೆಯದಾಗಿ ನೋಡಿ ಮೂರು ದಶಕಗಳಾದವು. ಇದೇ ಮೊದಲ ಬಾರಿಗೆ ನೆಪ್ಚೂನ್‌ ಗ್ರಹವನ್ನು ಕಡುಗೆಂಪಿನಲ್ಲಿ ನೋಡುತ್ತಿದ್ದೇವೆ’ ಎಂದು ನೆಪ್ಚೂನ್‌ ಕುರಿತು ಅಧ್ಯನ ನಡೆಸಿರುವ ಪರಿಣತ ಮತ್ತು ಅಂತರ್‌ಶಿಸ್ತೀಯ ವಿಜ್ಞಾನಿ ಹೈಡಿ ಹ್ಯಾಮೆಲ್ ಹೇಳಿರುವುದಾಗಿ ಜೇಮ್ಸ್‌ ವೆಬ್‌ನ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು