ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಲಭೆಕೋರರು 'ದೇಶೀಯ ಭಯೋತ್ಪಾದಕರು'; ಜೋ ಬೈಡನ್

Last Updated 8 ಜನವರಿ 2021, 1:09 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕ ಕ್ಯಾಪಿಟಲ್‌ ಕಟ್ಟಡದ ಮೇಲೆ ನಡೆದ ದಾಳಿಯನ್ನು ಬಲವಾಗಿ ಖಂಡಿಸಿರುವ ನಿಯೋಜಿತ ಅಧ್ಯಕ್ಷ ಜೋ ಬೈಡನ್, ಈ ಕೃತ್ಯಕ್ಕೆ ನಿರ್ಗಮಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರಣ ಎಂದು ದೂಷಿಸಿದರು.

ಅಮೆರಿಕ ಕ್ಯಾಪಿಟಲ್‌ಗೆ ನುಗ್ಗಿದ ಗಲಭೆಕೋರರನ್ನು 'ದೇಶೀಯ ಭಯೋತ್ಪಾದಕರು' ಎಂದು ಜರೆದಿರುವ ಜೋ ಬೈಡನ್, ದೇಶದ ಇತಿಹಾಸದಲ್ಲೇ ಅತ್ಯಂತ ಕರಾಳ ದಿನ ಎಂದು ಹೇಳಿದ್ದಾರೆ.

ಇದು ಭಿನ್ನಾಭಿಪ್ರಾಯವಲ್ಲ. ಪ್ರತಿಭಟನೆಯು ಅಲ್ಲ. ಇದು ಅಸ್ತವ್ಯಸ್ಥ ಸ್ಥಿತಿ ಎಂದು ಅಧ್ಯಕ್ಷೀಯ ಚುನಾವಣೆಯನ್ನು ಪ್ರಮಾಣೀಕರಿಸುವ ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಅಡ್ಡಿಪಡಿಸುವ ಉದ್ದೇಶದಿಂದ ಡೊನಾಲ್ಡ್ ಟ್ರಂಪ್ ಬೆಂಬಲಿಗರು ನಡೆಸಿದ ಹಿಂಸಾಚಾರವನ್ನು ಖಂಡಿಸಿದರು.

ಅವರು ಪ್ರತಿಭಟನಾಕಾರರಲ್ಲ, ಅವರನ್ನು ಪ್ರತಿಭಟನಾಕಾರರು ಎಂದು ಕರೆಯಲು ಧೈರ್ಯ ಮಾಡಬೇಡಿ. ಅವರು ಗಲಭೆಕೋರರು, ದಂಗೆಕೋರರು, ದೇಶೀಯ ಭಯೋತ್ಪಾದಕರು. ಇದುವೇ ಮೂಲ ಎಂದು ಹೇಳಿದರು.

ಡೊನಾಲ್ಡ್ ಟ್ರಂಪ್ ತನ್ನ ಅಧಿಕಾರವಧಿಯಲ್ಲಿ ಡೆಮಾಕ್ರಾಟಿಕ್ ಸಂಸ್ಥೆಗಳನ್ನು ಮಟ್ಟಹಾಕಲು ಕೈಗೊಂಡ ಕ್ರಮಗಳು ವಾಷಿಂಗ್ಟನ್‌ನಲ್ಲಿ ಅಪಾಯಕ್ಕೆ ಕಾರಣವಾಯಿತು ಎಂದು ಆರೋಪಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ಪ್ರಜಾಪ್ರಭುತ್ವ, ನಮ್ಮ ಸಂವಿಧಾನ, ಕಾನೂನುಗಳನ್ನು ತಿರಸ್ಕಾರ ಮಾಡಿದ್ದು, ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ನಿರಂತರ ಆಕ್ರಮಣ ಮಾಡಿದ್ದಾರೆ. ನಿನ್ನೆಯ ದಾಳಿಯ ಇದರ ಪರಾಕಾಷ್ಠೆಯಾಗಿದೆ ಎಂದರು.

2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ಗೆ ಸೋಲು ಎದುರಾಗಿತ್ತು. ಆದರೆ ಸೋಲೊಪ್ಪಿಕೊಳ್ಳಲು ತಯಾರಿಲ್ಲದ ಟ್ರಂಪ್, ಚುನಾವಣೆಯಲ್ಲಿ ಮೋಸ ನಡೆದಿದೆ ಎಂದು ಆರೋಪಿಸಿದ್ದರು. ಜೋ ಬೈಡನ್ ಗೆಲುವಿಗೆ ಅಧಿಕೃತ ಮುದ್ರೆ ಒತ್ತುವ ಸಾಂವಿಧಾನಿಕ ಪ್ರಕ್ರಿಯೆಗೆ ಅಡ್ಡಿಪಡಿಸುವುದು ಹಿಂಸಾಚಾರದ ಹಿಂದಿನ ಉದ್ದೇಶವಾಗಿತ್ತು. ಈ ಜಟಾಪಟಿಯಲ್ಲಿ ಒಬ್ಬ ಮಹಿಳೆ ಸೇರಿ ನಾಲ್ವರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT