ಗುರುವಾರ , ಜನವರಿ 28, 2021
18 °C

ಬೈಡನ್‌ ಬಲ ಪಾದದ ಮೂಳೆಯಲ್ಲಿ ಕೂದಲೆಳೆಯಷ್ಟು ಸೀಳು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ಚುನಾಯಿತ ಅಧ್ಯಕ್ಷ ಜೊ ಬೈಡನ್‌ ಅವರ ಬಲಗಾಲಿನ ಪಾದದ ಮೂಳೆಯಲ್ಲಿ ಕೂದಲೆಳೆಯಷ್ಟು ಸೀಳು ಕಾಣಿಸಿಕೊಂಡಿದೆ. ನಡೆದಾಡಲು ಅನುಕೂಲವಾಗುವ ಬೂಟುಗಳನ್ನು ಅವರು ಕೆಲವು ವಾರಗಳ ಕಾಲ ಧರಿಸಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ತಮ್ಮ ಸಾಕು ನಾಯಿಯೊಂದಿಗೆ ಶನಿವಾರ ಆಟವಾಡುವ ವೇಳೆ ಅವರು ಜಾರಿ ಬಿದ್ದಿದ್ದರು. ಅವರ ಹಿಮ್ಮಡಿ ಕೂಡ ಹೊರಳಿತ್ತು.

‘ಎಕ್ಸ್‌ರೇ ಮಾಡಿದ ಸಂದರ್ಭದಲ್ಲಿ ಪಾದದ ಮೂಳೆಯಲ್ಲಿ ಸೀಳು ಕಾಣಿಸಿಕೊಂಡಿರುವುದು ಗೊತ್ತಾಗಲಿಲ್ಲ. ಮತ್ತಷ್ಟು ಪರೀಕ್ಷೆಗಳನ್ನು ನಡೆಸಿದ ನಂತರ ಗೊತ್ತಾಯಿತು’ ಎಂದು ಬೈಡನ್‌ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಕೆವಿನ್‌ ಒಕೂನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು