ಸೋಮವಾರ, ನವೆಂಬರ್ 30, 2020
26 °C

ಅರಿಜೋನಾದಲ್ಲಿ ಬೈಡನ್‌ಗೆ ಜಯ, ಟ್ರಂಪ್‌ಗೆ ಭಾರಿ ಹಿನ್ನಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಅವರು ಅರಿಜೋನಾ ರಾಜ್ಯದಲ್ಲೂ ವಿಜಯ ಸಾಧಿಸಿದ್ದಾರೆ. ಬೈಡನ್‌ ಅವರಿಗೆ 11 ಎಲೆಕ್ಟೋರ್‌ ಮತಗಳ ಸಿಕ್ಕಿದ್ದು, ಈ ಮೂಲಕ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಭಾರೀ ಮುನ್ನಡೆ ಸಾಧಿಸಿದ್ದಾರೆ ಎಂದು ಅಮೆರಿಕದ ಪ್ರಮುಖ ಮಾಧ್ಯಮಗಳು ಶುಕ್ರವಾರ ಹೇಳಿವೆ.

ಅರಿಜೋನಾ, ರಿಪಬ್ಲಿಕನ್‌ ಪಕ್ಷದ ಭದ್ರಕೋಟೆಯಾಗಿತ್ತು.

ಇದನ್ನೂ ಓದಿ: 

ಟ್ರಂಪ್‌ ಅವರು ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಸ್ವೀಕರಿಸಿಲ್ಲ. ಅಲ್ಲದೇ 11 ಎಲೆಕ್ಟೋರ್‌ ಮತಗಳನ್ನು ಪಡೆಯುವ ಮೂಲಕ 290 ಸ್ಥಾನಗಳನ್ನು ಬೈಡನ್‌ ಪಡೆದಿದ್ದಾರೆ. ಹೀಗಾಗಿ ಟ್ರಂಪ್‌ ಅವರ ಮೇಲೆ ಒತ್ತಡ ಇನ್ನೂ ಹೆಚ್ಚಾಗಿದೆ ಎಂದು ಸಿಎನ್‌ಎನ್‌ ವರದಿ ಮಾಡಿದೆ.

ಬೈಡನ್‌ ಅವರು 11,000 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ. 1996ರಲ್ಲಿ ಅಧ್ಯಕ್ಷ ಬಿಲ್‌ ಕ್ಲಿಟನ್ ಬಳಿಕ ಮೊದಲ ಬಾರಿ ಬೈಡನ್‌ ಅವರು ಈ ರೀತಿಯ ಗೆಲುವನ್ನು ಪಡೆದಿದ್ದಾರೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ಹೇಳಿದೆ.

1996ರ ಬಳಿಕ ಅರಿಜೋನಾದಲ್ಲಿ ಒಮ್ಮೆಯೂ ಡೆಮಾಕ್ರಟಿಕ್‌ ಪಕ್ಷದ ಪರವಾಗಿ ಮತ ಬಂದಿರಲಿಲ್ಲ. ಇಲ್ಲಿಂದಲೇ 2016ರಲ್ಲಿ ಟ್ರಂಪ್‌ ಅವರು ಹಿಲರಿ ಕ್ಲಿಟನ್‌ ವಿರುದ್ಧ ಜಯ ಸಾಧಿಸಿದ್ದರು. ಆದರೆ ಈ ಬಾರಿ ಬೈಡನ್‌ ಅವರು  ಗೆಲುವು ಪಡೆದಿದ್ದಾರೆ.

ಇದನ್ನೂ ಓದಿ: 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು