ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾ ಹ್ಯಾರಿಸ್‌ ಅಮೆರಿಕದ ಉಪಾಧ್ಯಕ್ಷೆಯಾಗುತ್ತಾರೆ: ಪತಿ ಡೌಗ್ಲಾಸ್‌ ವಿಶ್ವಾಸ

Last Updated 21 ಆಗಸ್ಟ್ 2020, 5:36 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ’ಪ್ರತಿ ದಿನವೂ ಜನರಿಗಾಗಿ ನ್ಯಾಯದ ಪರ ಹೋರಾಟ ನಡೆಸುತ್ತಿರುವ ಸೆನೆಟರ್‌ ಕಮಲಾ ಹ್ಯಾರಿಸ್‌ ಅವರು ಅದೇ ಜನರಿಂದಲೇ ಅಮೆರಿಕದ ಶ್ರೇಷ್ಠ ಉಪಾಧ್ಯಕ್ಷೆಯಾಗಿ ಆಯ್ಕೆಯಾಗುತ್ತಾರೆ’ ಎಂದು ಕಮಲಾ ಅವರ ಪತಿ ಡೌಗ್ಲಾಸ್ ಎಮ್ಹಾಫ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಮಲಾ ಹ್ಯಾರಿಸ್ ಅವರನ್ನು ಅಧಿಕೃತವಾಗಿ ಡೆಮಾಕ್ರಟಿಕ್ ಪಕ್ಷದಿಂದ ಅಮೆರಿಕದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಘೋಷಿಸಿದ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

’ಕಮಲಾ ಉಪಾಧ್ಯಕ್ಷೆಯಾಗಿ ಆಯ್ಕೆಯಾಗುತ್ತಾರೆ. ಕಮಲಾ ಮತ್ತು ಬೈಡನ್ ಜೋಡಿ ಉತ್ತಮ ಕಾರ್ಯ ಮಾಡುತ್ತಾರೆ’ ಎಂದು ಎಮ್ಹಾಫ್ ವಿಶ್ವಾಸ ವ್ಯಕ್ತಪಡಿಸಿದರು.

ನ್ಯೂಯಾರ್ಕ್‌ನ ಬ್ರೂಕ್ಲಿನ್‌ ಮೂಲದ ಎಮ್ಹಾಫ್, ಲಾಸ್‌ಏಂಜಲೀಸ್‌ನಲ್ಲಿ ಎಂಟರ್‌ಟೈನ್‌ಮೆಂಟ್ ಇಂಡಸ್ಟ್ರಿಯಲ್ಲಿ ಅಟಾರ್ನಿಯಾಗಿದ್ದಾರೆ. ಸದ್ಯ ಪತ್ನಿ ಪರ ಚುನಾವಣಾ ಪ್ರಚಾರಕ್ಕಾಗಿ ಕೆಲಸಕ್ಕೆ ರಜೆ ಹಾಕಿದ್ದಾರೆ. ಚುನಾವಣಾ ಪ್ರಚಾರದ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ.

’ನಾವು ಈ ಚುನಾವಣೆಯಲ್ಲಿ ಗೆಲ್ಲುವುದರ ಜತೆಗೆ ದೇಶಕ್ಕಾಗಿ ಅದಕ್ಕಿಂತ ಹೆಚ್ಚಿನದನ್ನು ಮಾಡಬೇಕಿದೆ. ಅದಕ್ಕಾಗಿ ನಮಗೆ ಜನಾದೇಶ ಬೇಕಿದೆ. ಆ ಮೂಲಕ ನಮ್ಮ ದೇಶದಲ್ಲಿ ನಾವು ಯಾರು ಎಂಬುದನ್ನು ಈಗಿನ ಅಧ್ಯಕ್ಷರಿಗೆ ತಿಳಿಸಿ ಹೇಳಬೇಕಾಗಿದೆ ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT