ಶುಕ್ರವಾರ, ಮೇ 20, 2022
19 °C

ಗ್ರೀನ್‌ಕಾರ್ಡ್‌: ದೇಶವಾರು ಮಿತಿ ರದ್ದು–ಮಸೂದೆ ಅಂಗೀಕಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಉದ್ಯೋಗ ಆಧಾರಿತ ವಲಸೆ ವೀಸಾದ ಮೇಲೆ ಅಮೆರಿಕಕ್ಕೆ ಬರುವವರಿಗೆ ನೀಡುವ ಗ್ರೀನ್‌ಕಾರ್ಡ್‌ಗೆ ಸಂಬಂಧಿಸಿದ ದೇಶವಾರು ಮಿತಿಯನ್ನು ತೆಗೆದುಹಾಕುವ ಮಸೂದೆಗೆ ಸಂಸದೀಯ ಸಮಿತಿ ಅಂಗೀಕಾರ ನೀಡಿದೆ.

ಕುಟುಂಬ ಆಧಾರಿತ ವಲಸೆ ವೀಸಾ ಹೊಂದಿದವರಿಗೆ ನೀಡಲಾಗುವ ಗ್ರೀನ್‌ಕಾರ್ಡ್‌ಗೆ ಸಂಬಂಧಿಸಿದ ದೇಶವಾರು ಮಿತಿಯನ್ನು ಶೇ 7ರಿಂದ ಶೇ 15ಕ್ಕೆ ಹೆಚ್ಚಿಸಲು ಸಹ ಈ ಸಮಿತಿ ಅಂಗೀಕಾರ ನೀಡಿದೆ.

ಇದು ಕಾಯ್ದೆ ರೂಪದಲ್ಲಿ ಜಾರಿಗೊಂಡರೆ, ಉದ್ಯೋಗ ಅರಸಿ ಅಮೆರಿಕ್ಕೆ ಬರುವ ಭಾರತ ಹಾಗೂ ಚೀನಾದವರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು