ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೈತ್‌ ಪ್ರಧಾನಿಯಾಗಿ ಶೇಖ್‌ ಸಬಾ ಅಲ್‌ ಖಲೀದ್‌ ಮರು ನೇಮಕ

Last Updated 23 ನವೆಂಬರ್ 2021, 11:15 IST
ಅಕ್ಷರ ಗಾತ್ರ

ದುಬೈ: ಕುವೈತ್‌ ಪ್ರಧಾನಿಯಾಗಿ ಶೇಖ್‌ ಸಬಾ ಅಲ್‌ ಖಲೀದ್ ಅಲ್‌ ಸಬಾ ಅವರು ಮರುನೇಮಕ ಆಗಿದ್ದಾರೆ. ಸ್ಥಳೀಯವಾಗಿರುವ ರಾಜಕೀಯ ಅನಿಶ್ಚಿತತೆಯ ನಡುವೆಯೇ ಸಂಪುಟವನ್ನು ರಚಿಸುವ ಸವಾಲು ಅವರ ಮೇಲಿದೆ.

ಚುನಾಯಿತ ಸಂಸತ್ತಿನ ಜೊತೆಗಿನ ರಾಜಕೀಯ ಅನಿಶ್ಚಿತತೆ ಹಿನ್ನೆಲೆಯಲ್ಲಿ ಸರ್ಕಾರ ನವೆಂಬರ್‌ 8ರಂದು ರಾಜೀನಾಮೆ ಸಲ್ಲಿಸಿತ್ತು.ಮರುನೇಮಕ ಕುರಿತು ಸರ್ಕಾರದ ಅಧಿಕೃತ ಮಾಧ್ಯಮ ಕೆಯುಎನ್‌ಎ ವರದಿ ಮಾಡಿದ್ದು, ಕುವೈತ್‌ನ ರಾಜ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿದೆ. ಶೇಖ್‌ ಸಭಾ ಅವರು 2019ರಿಂದಲೂ ಪ್ರಧಾನಿ ಸ್ಥಾನದಲ್ಲಿ ಇದ್ದಾರೆ.

ಸರ್ಕಾರದ ರಾಜೀನಾಮೆ ಬಳಿಕ ದೊರೆ ಶೇಖ್‌ ನವಾಬ್‌ ಅಲ್‌ ಅಹ್ಮದ್‌ ಅಲ್‌ ಸಬಾ ಅವರು ಕೆಲ ಸಾಂವಿಧಾನಿಕ ಅಧಿಕಾರವನ್ನು ರಾಜ ಶೇಖ್‌ ಮೆಷಲ್‌ ಅಲ್ ಅಹ್ಮದ್‌ ಅಲ್ ಸಬಾ ಅವರಿಗೆ ವಹಿಸಿದ್ದರು. ಇದರಲ್ಲಿ ಪ್ರಧಾನಿ ನೇಮಕ ಹೊಣೆಯೂ ಸೇರಿತ್ತು.

ಕೋವಿಡ್‌ ಪರಿಸ್ಥಿತಿ ನಿರ್ವಹಣೆ, ಭ್ರಷ್ಟಾಚಾರ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿ ವಿರೋಧಪಕ್ಷದ ವಿವಿಧ ಸಂಸದರು ಪ್ರಧಾನಿ ಅವರ ಕಾರ್ಯವೈಖರಿ ಪ್ರಶ್ನಿಸಿದ್ದರು. ಇದರಿಂದಾಗಿ ರಾಜಕೀಯ ಅಸ್ಥಿರತೆ ನಿರ್ಮಾಣವಾಗಿತ್ತು.

ರಾಜಕೀಯ ಅಸ್ಥಿರತೆಯು ಶಾಸಕಾಂಗದ ಕಾರ್ಯವೈಖರಿಯ ಮೇಲೂ ನಕಾರಾತ್ಮಕ ಪರಿಣಾಮ ಬೀರಿತ್ತು. ಹಣಕಾಸು ಸುಧಾರಣೆ ಕ್ರಮಗಳು ಏರುಪೇರಾಗಿತ್ತು. 20–21 ಹಣಕಾಸು ವರ್ಷದಲ್ಲಿ ಕೋವಿಡ್‌ನಿಂದಾಗಿ ಕುವೈತ್‌ನ ಜಿಡಿಪಿ ಶೇ 15.4ರಷ್ಟು ಕುಸಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT