ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನ್ನಡೆಯಿರಿ, ನಾಯಕತ್ವ ವಹಿಸಿಕೊಳ್ಳಿ: ಮಹಿಳೆಯರಿಗೆ ಕಮಲಾ ಹ್ಯಾರಿಸ್ ಕರೆ

Last Updated 31 ಆಗಸ್ಟ್ 2020, 8:21 IST
ಅಕ್ಷರ ಗಾತ್ರ

ವಾಷಿಂಗ್ಟನ್: ದಕ್ಷಿಣ ಏಷಿಯಾದ ಮಹಿಳೆಯರು ಕೆಲಸ ಮಾಡಲು ಮತ್ತು ತಮ್ಮ ಸಮುದಾಯದ ನಾಯಕತ್ವದ ಹೊಣೆ ಹೊತ್ತುಕೊಳ್ಳಲು ಮುಂದಾಗಬೇಕು ಎಂದು ಅಮೆರಿಕದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಡೆಮಾಕ್ರಾಟ್ ಪಕ್ಷದಿಂದ ಅಮೆರಿಕದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿರುವ 55 ವರ್ಷದ ಕಮಲಾ ಹ್ಯಾರಿಸ್ ಶನಿವಾರ ಚುನಾವಣಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡುತ್ತಿದ್ದರು.

'ಕಾರ್ಯಕ್ರಮ ವೀಕ್ಷಿಸುತ್ತಿರುವ ಎಲ್ಲ ಮಹಿಳೆಯರು, ನೀವು ಜನಿಸಿದ ದಿನದಂದೇ ನಾಯಕತ್ವವೂ ಆರಂಭವಾಗಿದೆ ಎಂಬುದನ್ನು ತಿಳಿಯಬೇಕು ಎಂದು ಬಯಸುತ್ತೇನೆ. ನಾಯಕತ್ವ ವಹಿಸಿಕೊಳ್ಳಲು ಹಿರಿಯರು, ಕಿರಿಯರು ಎಂಬುದಿಲ್ಲ' ಎಂದು ಹೇಳಿದರು.

ಪ್ರಮುಖ ಪಕ್ಷವೊಂದರಿಂದ ಅಮೆರಿಕದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಹೊರಹೊಮ್ಮುವ ಮೂಲಕ ಕಮಲಾ ಅವರು ಅಮೆರಿಕದ ರಾಜಕಾಣರದಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

‘ನಿಮ್ಮ ಸಮುದಾಯದ ಚಟುವಟಿಕೆಗಳಲ್ಲಿ ಭಾಗವಹಿಸಿ. ನೇತೃತ್ವ ವಹಿಸಿಕೊಳ್ಳಿ. ಏನಾದರೂ ಕೆಲಸ ಮಾಡಿ, ಅದಕ್ಕೊಂದು ಅರ್ಥವಿದೆ. ಮುನ್ನಡೆಯಿರಿ' ಎಂದು ಮಹಿಳೆಯರಿಗೆ ಕರೆ ನೀಡಿದರು.

ಅಮೆರಿಕನ್ ಇಂಪ್ಯಾಕ್ಟ್ ಫಂಡ್ ಮತ್ತು ಇಂಡಿಯನ್ಸ್ ಫಾರ್ ಬೈಡನ್ ನ್ಯಾಷನಲ್ ಕೌನ್ಸಿಲ್ ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿತ್ತು.

'ನಿಮಗೆ ಗೊತ್ತಿದೆ. ನನ್ನ ತಾಯಿ ಭಾರತದಿಂದ ತನ್ನ 19ನೇ ವಯಸ್ಸಿನಲ್ಲಿ ಕ್ಯಾನ್ಸರ್ ಗುಣಪಡಿಸುವ ಗುರಿಯೊಂದಿಗೆ ಇಲ್ಲಿಗೆ ಬಂದರು. ಅಮೆರಿಕಕ್ಕೆ ನೀಡಿದ ಭರವಸೆ ಈಡೇರಿಸಲು ತನ್ನ ಜೀವನ ಮುಡಿಪಾಗಿಟ್ಟಿದ್ದರು' ಎಂದು ಸ್ಮರಿಸಿದರು.

ಜೋ ಬೈಡನ್ ಅವರ ಅವಧಿಯು ವಿವಿಧತೆಯಲ್ಲಿಯೇ ಅಮೆರಿಕದ ಬಲವಿದೆ ಎಂಬುದನ್ನು ನಿರೂಪಿಸಲಿದೆ ಎಂದು ಕಮಲಾ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT