ಭಾನುವಾರ, ಜನವರಿ 23, 2022
27 °C

ಸಿಖ್‌ ಚಾಲಕನ ಮೇಲೆ ಹಲ್ಲೆ ಪ್ರಕರಣ: ಆರೋಪಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌ (ಪಿಟಿಐ): ಇಲ್ಲಿನ ಜಾನ್‌ ಎಫ್‌ ಕೆನಡಿ (ಜೆಎಫ್‌ಕೆ) ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ಮೂಲದ ಸಿಖ್‌ ಟ್ಯಾಕ್ಸಿ ಚಾಲಕನೊಬ್ಬನ ಮೇಲೆ ಹಲ್ಲೆ ನಡೆಸಿ ಆತನ ಮುಂಡಾಸನ್ನು ಕಿತ್ತೆಸೆದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಅಮೆರಿಕದ ಅಧಿಕಾರಿಗಳು ಬಂಧಿಸಿದ್ದು, ದ್ವೇಷ ಹಿಂಸಾಚಾರದ ಪ್ರಕರಣ ದಾಖಲಿಸಿದ್ದಾರೆ. 

ಸಿಖ್‌ ಚಾಲಕನ ಮೇಲೆ ಮುಗಿಬಿದ್ದ ವ್ಯಕ್ತಿ ‘ರುಮಾಲಿನ ಜನರೇ, ನಿಮ್ಮ ದೇಶಕ್ಕೆ ಹಿಂತಿರುಗಿ’ ಎನ್ನುತ್ತಾ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಜನವರಿ 3 ರಂದು ಘಟನೆ ನಡೆದಿದ್ದು ಗುರುವಾರ ಆರೋಪಿ ಮೊಹಮ್ಮದ್‌ ಹಸನೈನ್ ಅನ್ನು ಬಂಧಿಸಲಾಗಿದೆ. ಸಿಖ್‌ ವ್ಯಕ್ತಿಯ ಮನವಿ ಮೇರೆಗೆ ಆತನ ಹೆಸರನ್ನು ಗೋಪ್ಯವಾಗಿಡಲಾಗಿದೆ.

ಆರೋಪಿ ಹಸನೈನ್‌ ಬಂಧನವನ್ನು ನ್ಯೂಯಾರ್ಕ್‌ನ ಪೋರ್ಟ್‌ ಆಡಳಿತ ಮತ್ತು ನ್ಯೂಜೆರ್ಸಿ ಪೊಲೀಸ್‌ ಇಲಾಖೆ (ಪಿಎಪಿಡಿ) ಶುಕ್ರವಾರ ಖಚಿತಪಡಿಸಿವೆ ಎಂದು ಸಮುದಾಯ-ಆಧಾರಿತ ನಾಗರಿಕ ಮತ್ತು ಮಾನವ ಹಕ್ಕುಗಳ ಸಂಸ್ಥೆ ಸಿಖ್ ಒಕ್ಕೂಟ ತಿಳಿಸಿದೆ. 

ಆರೋಪಿ ಹಸನೈನ್‌ ಚಾಲಕನನ್ನು ಎಳೆದಾಡುವಾಗ ಪದೇ ಪದೇ ಆತನಿಗೆ ‘ನಿಮ್ಮ ದೇಶಕ್ಕೆ ಹಿಂತಿರುಗಿ’, ’ರುಮಾಲಿನ ಜನ’ ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಆದ್ದರಿಂದ ಇದೊಂದು ದ್ವೇಷಪೂರಿತ ಹಿಂಸಾಚಾರ ಎಂದು ಪರಿಗಣಿಸಲಾಗಿದೆ. ಹಸನೈನ್‌ ವಿರುದ್ಧ ದ್ವೇಷ ಅಪರಾಧ, ಕಿರುಕುಳದ ಪ್ರಕರಣ ದಾಖಲಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು